ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಸಹಾಯ ಹಸ್ತ

ಬೆಂಗಳೂರು, ಫೆ.8, ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿ ತೊಡಗಿಸಿಕೊಂಡ ಮಹಿಳಾ ಉದ್ಯಮಿಗಳ ಸಬಲೀಕರಣದ ಉದ್ದೇಶದಿಂದ ಶಿಪ್ ರಾಕೇಟ್ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಆರಂಭ್ 2020’ ಎನ್ನುವ ಸ್ಪರ್ಧೆಯನ್ನು ಏರ್ಪಿಡಿಸಿದೆ. ಸ್ಪರ್ಧೆಯಲ್ಲಿ ವಿಜೇತರಾದ 3 ಉದ್ಯಮಿಗಳಿಗೆ ತಲಾ 3 ಲಕ್ಷ ರೂಪಾಯಿ ಬಹುಮಾನ ಕೂಡ ನೀಡಲಾಗುತ್ತದೆ.

ಮಹಿಳಾ ಉದ್ಯಮಿಗಳಿಂದ ‘ಬಿಸಿನೆಸ್ ಐಡಿಯಾಸ್’ ಆಹ್ವಾನಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ. ಮಹಿಳಾ ಉದ್ಯಮಿಗಳ ಬಿಸಿನೆಸ್ ಐಡಿಯಾಗಳು ನನಸಾಗಿಸಲು ಶಿಪ್ ರಾಕೆಟ್ ಸಂಸ್ಥೆಯು ವೇದಿಕೆ ಕಲ್ಪಿಸುತ್ತದೆ. ಉದ್ಯಮವನ್ನು ಈಗಷ್ಟೇ ಪ್ರಾರಂಭಿಸಿರುವ ಅಥವಾ ‘ಐಡಿಯಾ ಹಂತ’ದಲ್ಲಿರುವ ಉದ್ಯಮಗಳ ಮಹಿಳಾ ಉದ್ಯಮಿಗಳು ಅವರು ವಿದ್ಯಾರ್ಥಿಗಳಾಗಿರಬಹುದು, ಜಾಬ್ ಮಾಡುತ್ತಿರುವವರಾಗಿರಬಹುದು ಅಥವಾ ಗೃಹಿಣಿಯರೇ ಆಗಿದ್ದರು ಸಹ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫೆಬ್ರವರಿ 1 ರಿಂದ 17ರವೆಗೆ ನೋಂದಣಿಗೆ ಅವಕಾಶವಿರುತ್ತದೆ. ಮಾರ್ಚ್ 6ರಂದು ವಿಜೇತ ಮಹಿಳಾ ಉದ್ಯಮಗಳ ಹೆಸರು ಬಹಿರಂಗಮಾಡಲಾಗುವುದು ಮತ್ತು ಅಂದೇ ಸನ್ಮಾನ ಕೂಡ ಮಾಡಲಾಗುವುದು.

“ಎಸ್‌ಎಂಇ ಮತ್ತು ಡಿ 2 ಸಿ ವಿಭಾಗದಲ್ಲಿ ಮಹಿಳಾ ಮಾರಾಟಗಾರರ ಕೊಡುಗೆಯನ್ನು ನಾವು ನೋಡಿದ್ದೇವೆ. ಈ ಸ್ಪರ್ಧೆಯ ಮೂಲಕ ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಆಚರಿಸಲು ಮತ್ತು ಬೆಳೆಸಲು ಮತ್ತು ಅವರ ಪ್ರಯಾಣದಲ್ಲಿ ಅವರನ್ನು ಬೆಂಬಲಿಸಲು ನಾವು ಬಯಸುತ್ತೇವೆ.” ಎಂದು ಶಿಪ್ ರಾಕೆಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಸಾಹಿಲ್ ಗೋಯೆಲ್ ಹೇಳಿದರು.