ಸನಾ, ಜೂನ್ 4, ಭಾರೀ ಮಳೆ - ಪ್ರವಾಹದಿಂದಾಗಿ ಪೂರ್ವ ಯೆಮೆನ್ ಪ್ರಾಂತ್ಯದ ಹದ್ರಾಮೌತ್‌ನಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದಾರೆ ಎಂದು ಯೆಮನ್ ಮಾಧ್ಯಮ ಗುರುವಾರ ವರದಿ ಮಾಡಿದೆ.ಅಲ್ ಖತ್ನ್ ನಗರದ ಬಳಿ ಒಂದೇ ಕುಟುಂಬದ ಐವರು ಮಕ್ಕಳು ನೀರು ಪಾಲಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಬೆಲ್ಕೀಸ್ ಟಿವಿ ವರದಿ ಮಾಡಿದೆ.ದಟ್ಟವಾದ ಮಂಜು ಮತ್ತು ಭಾರಿ ಮಳೆಯಿಂದ ಉಂಟಾದ ರಸ್ತೆ ಅಪಘಾತದಲ್ಲಿ ಇನ್ನೂ ನಾಲ್ಕು ಜನರು ಸಾವನ್ನಪ್ಪಿದ್ದು ಮತ್ತು ಇತರೆ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಈ ದುರಂತದಿಂದ ಅನೇಕ ಕಟ್ಟಡಗಳು, ಆಸ್ತಿಪಾಸ್ತಿಗೂ ಹೆಚ್ಚಿನ ಹಾನಿಯಾಗಿದೆ ಹದ್ರಾಮೌತ್‌ನಲ್ಲಿ ಕೃಷಿ ಪ್ರದೇಶಗಳಿಗೂ ಹಾನಿಯಾಗಿದೆ ಎಂದೂ ವರದಿಯಾಗಿದೆ.