ಶಿಮ್ಲಾ, ನ 7: ಮಹಾ ಚಂಡಮಾರುತ ಹಿಮಾಚಲ ಪ್ರದೇಶದ ಮೇಲೆ ಪ್ರಭಾವ ಬೀರುತ್ತಿದ್ದು, ರಾಜ್ಯದ 8 ಜಿಲ್ಲೆಗಳು ತೀವ್ರ ಮಂಜು ಇಲ್ಲವೇ ಮಳೆಯಿಂದ ಬಾಧಿತವಾಗಿವೆ. ಇದರಿಂದ ರಾಜ್ಯದಲ್ಲಿ ಪೂರ್ವ ಚಳಿಗಾಲದ ವಾತಾವರಣ ನಿರ್ಮಾಣವಾಗಿದೆ. ಆದರೆ, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಜ್ಜಾಗಿರುವ ಇಲ್ಲಿನ ಧರ್ಮಶಾಲಾದಲ್ಲಿ ಮಾತ್ರ ಒಣ ಹವೆಯಿದೆ. ಇಲ್ಲಿ ನಡೆಯಲಿರುವ ಎರಡು ದಿನಗಳ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ, 200ಕ್ಕೂ ಹೆಚ್ಚು ವಿದೇಶಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉಳಿದಂತೆ ಕಿಲೋಂಗ್ ಜಿಲ್ಲೆಯ ಲಹೌಲ್ ಸ್ಪಿತಿಯಲ್ಲಿ ಒಂದು ಸೆಂಟಿಮೀಟರ್ ಮಂಜು ಬಿದ್ದಿರುವುದು ದಾಖಲಾಗಿದೆ. ಮನಾಲಿಯ ಪ್ರವಾಸಿ ರೆಸಾರ್ಟ್ 11 ಮಿಮೀ, ಶಿಮ್ಲಾ 5.6 ಮಿಮೀ ಮಳೆಯಾಗಿದೆ. ರಾಜ್ಯದ ಪ್ರಸಕ್ತ ಹವೆಯನ್ನು ಜೋಳ, ಬಾರ್ಲ್, ಕಾಳುಗಳಂತಹ ಬೆಳೆಗಳಿಗೆ ಉತ್ತಮವಾಗಿವೆ.