ಕೊಡಗಿನಲ್ಲಿ ಭಾರೀ ಮಳೆ ಭಾಗಮಂಡಲ, ತಲಕಾವೇರಿ ಜಲಾವೃತ


ತಿಕಂಘರ್ (ಮಧ್ಯ ಪ್ರದೇಶ): ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದ ತನ್ನ ತಾಯಿಯ ಮೃತದೇಹವನ್ನು ಸರಿಯಾದ ಸಮಯಕ್ಕೆ ಶವ ಸಾಗಣಿಕೆ ವಾಹನ ಸಿಗದ ಕಾರಣ ಮಗನೊಬ್ಬ  ಮೋಟಾರ್ ಬೈಕ್ ನಲ್ಲಿ ಸಾಗಿಸಿದ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ.  

ಸೋಮವಾರದಂದು ಹಾವು ಕಚ್ಚಿ ಮೃತಪಟ್ಟಿದ್ದ ಕುನ್ವರ್ ಬಾಯಿ ಎಂಬ ಮಹಿಳೆಯ ಶವವನ್ನು ಆಕೆಯ ಪುತ್ರ ಮೋಟಾರ್ ಬೈಕ್ ನಲ್ಲಿ ಸಾಗಿಸಿರುವ ಕರುಣಾಜನಕ ಘಟನೆ ಮಧ್ಯಪ್ರದೇಶದ ಮೋಹನ್ಗಢ ಎನ್ನುವಲ್ಲಿ ನಡೆದಿದೆ. 

ಕುನ್ವರ್ ಬಾಯಿ ಹಾವು ಕಚ್ಚಿ ಸತ್ತ ಬಳಿಕ ಮೋಹನ್ಗಢದ  ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಆದರೆ ಇದಕ್ಕಾಗಿ ಶವ ಸಾಗಣೆ ಮಾಡಲು ಶವ ಸಾಗಾಟ ವಾಹನ ಕಳುಹಿಸಲು ಆಸ್ಪತ್ರೆಯವರು ಹಿಂದೇಟು ಹಾಕಿದ್ದಾರೆ. ಆಗ ಮಹಿಳೆಯ ಪುತ್ರ ತಾನೇ ಬೈಕ್ ನಲ್ಲಿ ಶವವನ್ನಿತ್ಟು ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ. 

ಕುನ್ವರ್ ಬಾಯಿ ಪುತ್ರ ಹಾಗೂ ಆಕೆಯ ಸಂಬಂಧಿಗಳು ಹೀಗೆ ಬೈಕ್ ನಲ್ಲಿ ಶವ ಸಾಗಿಸಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 

ಮಾದ್ಯಮಗಳಲ್ಲಿ ಈ ಘಟನೆ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಪ್ರಕರಣ ಕುರಿತಂತೆ ತನಿಖೆ ನಡೆಸಲು ಸೂಚಿಸಿದೆ."ನನಗೆ ಇದರ ಕುರಿತಂತೆ ಹೆಚ್ಚು ವಿವರ ತಿಳಿದಿಲ್ಲ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸೂಚಿಸಿದ್ದೇಬ್ನೆ" ಜಿಲ್ಲೆಯ ಹಿರಿಯ ಅಧಿಕಾರಿ ಎಸ್.ಕೆ. ಅಹಿವರ್ಾರ್ ಹೇಳಿದ್ದಾರೆ.