ಭಾರಿ ಮಳೆ : ಮಧ್ಯ ಚೀನಾದ ಹುನಾನ್ 20 ಜಿಲ್ಲೆಗಳಲ್ಲಿ ಪ್ರವಾಹ

ಚಾಂಗ್ಶಾ, ಜೂನ್ 08, ಭಾರಿ ಮಳೆ ಮತ್ತು ಪ್ರವಾಹದಿಂದ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ 93,500 ಕ್ಕೂ ಹೆಚ್ಚು ನಿವಾಸಿಗಳ ಜೀವನವನ್ನು ಅಸ್ತವ್ಯಸ್ತಗೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.  ಮತ್ತು ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಮೇ ಅಂತ್ಯದಲ್ಲಿ ಪ್ರಾರಂಭವಾದ ಮಳೆಯಿಂದಾಗಿ 20 ಕ್ಕೂ ಹೆಚ್ಚು ಕೌಂಟಿಗಳು ಮತ್ತು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.  3,205 ಜನರನ್ನು ಸ್ಥಳಾಂತರಿಸಲಾಗಿದೆ. ಪ್ರಾಂತೀಯ ಪ್ರವಾಹ ನಿಯಂತ್ರಣ ಮತ್ತು ಬರ ಪರಿಹಾರ ಕೇಂದ್ರ ಕಚೇರಿಯ ಪ್ರಕಾರ ಕೈಗಾರಿಕಾ ಮತ್ತು ಕೃಷಿ ಮೂಲಸೌಕರ್ಯಗಳು ಸಹ ಹಾನಿಗೊಳಗಾಗಿವೆ. ಸೋಮವಾರ ಬೆಳಿಗ್ಗೆ 10 ರ ಹೊತ್ತಿಗೆ, ಪ್ರಾಂತ್ಯದ ನಾಲ್ಕು ಮಧ್ಯಮ ಗಾತ್ರದ ಜಲಾಶಯಗಳ ನೀರಿನ ಮಟ್ಟವು ಅವುಗಳ ಪ್ರವಾಹ ಋತುವಿನ ಮಿತಿಯನ್ನು ಮೀರಿದೆ.ಮುಂದಿನ ವಾರವೂ ಭಾರಿ ಮಳೆಯಾಗಲಿದ್ದು,  ಮಳೆಯಿಂದ ಉಂಟಾಗುವ ಪ್ರವಾಹ, ಭೂಕುಸಿತ ಮತ್ತು ಇತರ  ವಿಪತ್ತುಗಳ ಬಗ್ಗೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.