ಆರೋಗ್ಯವೇ ಭಾಗ್ಯ ರೋಗ ಬರುವುದಕ್ಕಿಂತ ಮೊದಲು ಜಾಗೃತಿ ವಹಿಸಬೇಕು: ಡಾ. ಸರಸ್ವತಿ ಬಮ್ಮನಾಳ
ರಾಣಿಬೆನ್ನೂರ 26: ಕ್ಷಯ ರೋಗವು ಮಹಾಮಾರಿಯಂತಹ ರೋಗವೆನಲ್ಲ ಪ್ರಾರಂಭದಲ್ಲಿಯೇ ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಬೇಗ ಗುಣಮುಖರಾಗಬಹುದು ಮತ್ತು ಆರೋಗ್ಯವೇ ಭಾಗ್ಯ ಅವುಗಳ ವಿರುಧ್ಧ ಹೋರಾಟ ಮಾಡಬೇಕಾಗುತ್ತಿದೆ. ರೋಗ ಬರುವುದಕ್ಕಿಂತ ಮೊದಲು ಜಾಗೃತಿ ವಹಿಸಬೇಕು ಎಂದು ಎನ್‌ಎಸ್‌ಎಸ್ ಕಾರ್ಯಕ್ರಮಧಿಕಾರಿ ಡಾ. ಸರಸ್ವತಿ ಬಮ್ಮನಾಳ ಹೇಳಿದರು. ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ವಿಶ್ವ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಪ್ರತಿ ವರ್ಷ ಕ್ಷಯರೋಗವನ್ನು ಕೊನೆಗೊಳಿಸುವ ಜಾಗತಿಕ ಪ್ರಯತ್ನಗಳಿಂದ 2000 ರಿಂದ 79 ಮಿಲಿಯನ್ ಜೀವಗಳನ್ನು ಉಳಿಸಲಾಗಿದೆ. ಈ ವರ್ಷದ ಧ್ಯೇಯ ವಾಕ್ಯ ನಾವು ಕ್ಷಯೋಗವನ್ನು ಕೊನೆಗೊಳಿಸಲು ಹೆಚ್ಚು ಜಾಗೃತಿ ಮೂಡಿಸುವುದು ಅವಶ್ಯವಿದೆ ಎಂದರು. ಪ್ರಾಚಾರ್ಯ ಸಿಎ ಹರಿಹರ, ಡಿ.ಎಂ. ಇಂಗಳಗಿ, ಡಾ.ಮಧುಕುಮಾರ ಆರ್, ಡಾ ರಾಮರೆಡ್ಡಿ ರಡ್ಡೇರ, ಡಾ. ಪಿ.ಬಿ. ಕೊಪ್ಪದ, ಅಂಜನಾ ಪವಾರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.