ಲೋಕದರ್ಶನ ವರದಿ
ಕಂಪ್ಲಿ 11: ತಾಲೂಕಿನ ಜೆ.ಸಿ.ಐ ಸೋನಾ ಸಂಸ್ಥೆಯಿಂದ, ಇಲ್ಲಿನ ಭಾರತಿ ಶಿಶು ವಿದ್ಯಾಲಯದ ಆವರಣದಲ್ಲಿ ಗಭರ್ಿಣಿಯರಿಗೆ ಆರೋಗ್ಯ ಮಾಹಿತಿ ಕಾಯರ್ಾಗಾರ ಭಾನುವಾರ ನಡೆಯಿತು.
ತರಬೇತುದಾರರಾದ ಶ್ರೀರಂಗಪಟ್ಟಣ ರಾಮಕೃಷ್ಣ ಆಶ್ರಮದ ಟಿ.ವಿನಾಯಕ ಮಹಾರಾಜ್ ಮಾತನಾಡಿ, ಗಭರ್ಿಣಿಯರು ಪೌಷ್ಠಿಕ ಆಹಾರ, ಧಾನ್ಯಗಳನ್ನು ಸೇವಿಸುವುದರಿಂದ ಹುಟ್ಟಿದ ಮಗು ಬಲಿಷ್ಠವಾಗಿರುತ್ತದೆ. ದಿನಾಲು ಸ್ವಲ್ಪ ವಾಯು ವಿಹಾರ ಮಾಡುವುದರ ಜತೆಗೆ ವೈದ್ಯರು ನೀಡುವ ಸಲಹೆ ಸೂಚನೆ ಪಾಲಿಸಿದರೆ ಆರೋಗ್ಯವಂತ ಮಗು ಜನಿಸಲು ಸಾಧ್ಯ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಚನ್ನಬಸವರಾಜ ಮಾತನಾಡಿ, ಎಲ್ಲ ಗಭರ್ಿಣಿಯರು 3ತಿಂಗಳೊಳಗೆ ಸಮೀಪ್ ಕಿರಿಯ ಆರೋಗ್ಯ ಸಹಾಕಿಯರ ಬಳಿ ಹೆಸರು ನೊಂದಾಯಿಸಿಕೊಳ್ಳಬೇಕು. ಬಳಿಕ ತಪ್ಪದೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಎಂದರು. ಸಂಸ್ಥೆ ಅಧ್ಯಕ್ಷ ಇಂದ್ರಜಿತ್ಸಿಂಗ್, ನಿಕಟಪೂರ್ವ ಅಧ್ಯಕ್ಷ ರಾಕೇಶ್ ಬಾಗ್ರೇಚಾ, ಪದಾಧಿಕಾರಿಗಳಾದ ಗುರುಪ್ರಸನ್ನ, ಸುನೀಲ್ ಶೆಟ್ಟಿ, ಸಂತೋಷ, ಪ್ರಸಾದ್ ಗಡಾದ, ಅರವಿಂದ ಬುರೆಡ್ಡಿ, ರಮೇಶ ಬೆಳಂಕರ್, ಡಿ.ಭರತ್, ವರ್ತಕ ಶಾಂತೀಲಾಲ್ ಜೈನ್ ಇದ್ದರು. ಪಟ್ಟಣ ಸೇರಿದಂತೆ ಸಮೀಪದ ಗ್ರಾಮಗಳ ಗಭರ್ಿಣಿಯರು, ಆಶಾ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.