ಆರೋಗ್ಯ ಇಲಾಖೆಯ ಸೌಕರ್ಯ, ಸೌಲಭ್ಯಗಳು ಜನರಿಗೆ ದಕ್ಕುತ್ತಿವೆ: ಡಿಎಚ್ ಒ ಡಾ. ನೀರಜ್

Health Department facilities and amenities are reaching the people: DHO Dr. Neeraj

ಕಾರವಾರ 13:  ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಇಲಾಖೆಯ ಸೌಕರ್ಯ, ಸೌಲಭ್ಯಗಳು ಜನರಿಗೆ ದಕ್ಕುತ್ತಿವೆ  ಎಂದು ಉತ್ತರ ಕನ್ನಡ ಜಿಲ್ಲಾ ಡಿಎಚ್ ಒ,  ಡಾ. ನೀರಜ್  ಅಭಿಪ್ರಾಯಪಟ್ಟರು.  

ಕಾರವಾರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ​‍್ಪಟಟ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆ ಮಲೆರಿಯಾ, ಕಾಲರ ಹಾಗೂ ಆನೆ ಕಾಲು ಕಾಯಿಲೆ  ಮುಕ್ತ ಜಿಲ್ಲೆಯಾಗುತ್ತಿದೆ. ಕ್ಷಯ ರೋಗ ಸಹ  ಜಿಲ್ಲೆಯ 50 ಪಂಚಾಯತ ವ್ಯಾಪ್ತಿಯಲ್ಲಿ ಇಲ್ಲವಾಗಿದೆ. ಟಿಬಿ ಕಾಯಿಲೆ ಸಮಾಜಿಕ ಪಿಡಿಗು.ಇದನ್ನು ತೊಡೆದು ಹಾಕಲು ವೈದ್ಯರು ಪಣ ತೊಟ್ಟಿದ್ದಾರೆ ಎಂದರು. ಟಿಬಿ ಯನ್ನು ಉಳಿದ 250 ಪಂಚಾಯತಗಳಲ್ಲಿ ಕ್ಷಯ ರೋಗ ಓಡಿಸಲು ಪ್ರಯತ್ನ ಸಾಗಿವೆ  ಹಾಗೂ ದಾಂಡೇಲಿ, ಕಾರವಾರ ದಲ್ಲಿ ಟಿಬಿ ಓಡಿಸಲು ಸತತ ಪರಿಶ್ರಮ ಹಾಕಲಾಗುತ್ತಿದೆ ಎಂದರು.  ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ ಮಾತನಾಡಿ  ಆರೋಗ್ಯ ಇಲಾಖೆಯ ಜನರಿಗೆ ಹತ್ತಿರವಾಗಿದೆ.  

ವೈದ್ಯರು ಬಡರೋಗಿಗಳನ್ನು ಮಾನವೀಯ ದೃಷ್ಟಿಯಲ್ಲಿ ಉಪಚರಿಸುತ್ತಿದ್ದಾರೆ. ಆರೋಗ್ಯ ಸೌಕರ್ಯಗಳನ್ನು ಗಮನಿಸಿದರೆ  ಜಿಲ್ಲೆಯಲ್ಲಿ ಕಳೆದ 20 ವರ್ಷದ ಹಿಂದಿನ ಪರಿಸ್ಥಿತಿ ಈಗ ಇಲ್ಲ ಎಂದರು. ಪತ್ರಕರ್ತ ಟಿಬಿ ಹರಿಕಾಂತ  ಮಾತನಾಡಿ ಆರೋಗ್ಯ ಇಲಾಖೆ ಕಾರ್ಯ ಕ್ರಮಗಳು ಜನರಗೆ ಉಪಕಾರಿಯಾಗಿವೆ ಎಂದರು.ಉಪನ್ಯಾಸ ನೀಡಿದ ಡಾ.ರಮೇಶ್ ರಾವ್ ಮಲೇರಿಯಾ, ಆನೆಕಾಲು ರೋಗಳು ಜಿಲ್ಲೆಯಿಂದ ಪೂರ್ಣವಾಗಿ ಮೆರೆಯಾಗುವ ದಿನಗಳು ಹತ್ತಿರ ಇವೆ ಎಂದರು. ಶಿಶು ಮರಣ 96 ಮಾತ್ರ :ಡಾ. ನಟರಾಜ ಉಪನ್ಯಾಸ ನೀಡಿ ಜಿಲ್ಲೆಯಲ್ಲಿ ಕಳೆದ ವರ್ಷ 14525 ಶಿಶು ಜನನಗಳು ಆಗವೆ. ಈ ಪೈಕಿ 96 ಶಿಶುಗಳು ಮರಣ ಹೊಂದಿವೆ. ಒಂದು ಲಕ್ಷ ತಾಯಿಯರು ಮಕ್ಕಳು ಹೆತ್ತಾಗ ಕೇವಲ 7 ಜನ ಬಾಣಂತಿಯರು ಸಾವು ಅಪ್ಪಿದ್ದಾರೆ. ಶೇ.100  ರಷ್ಟು ಹೆರಿಗೆ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಶೇ.55  ಸರ್ಕಾರಿ ಆಸ್ಪತ್ರೆಗಳಲ್ಲಿ, ಶೇ.45 ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗಳಾಗುತ್ತಿವೆ ಎಂದರು. ಕಿಲ್ಕಾರಿ ಪೋರ್ಟಲ್ ಬಳಸಿ;ಕಿಲ್ಕಾರಿ ಪೋರ್ಟಲ್ ನಲ್ಲಿ  ಗರ್ಭಿಣಿ ಸ್ತ್ರಿಯರು ಹೆಸರು ನೊಂದಾಯಿಸಿಕೊಂಡರೆ, ಅವರ ಹೆರಿಗೆ ಹಾಗೂ ನಂತರದ ಒಂದು ವರ್ಷದ ವರೆಗೆ ಉಚಿತ ಆರೋಗ್ಯ ಸೇವೆ ಸಿಗಲಿದೆ. 0124 4451 660 ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಲು ಡಾ.ನಟರಾಜ ವಿನಂತಿಸಿದರು. 50 ಪಂಚಾಯತ ಟಿಬಿ ಮುಕ್ತ: ಡಾ.ಹರ್ಷ ಉಪನ್ಯಾಸ ನೀಡಿ ಜಿಲ್ಲೆಯಲ್ಲಿ 1500 ಟಿಬಿ ರೋಗಿಗಳು ಇದ್ದಾರೆ. ಪ್ರತಿ ವರ್ಷ ಇದೇ ಪ್ರಮಾಣದಲ್ಲಿ ಟಿಬಿ ಕಾಯಿಲೆ ಪತ್ತೆಯಾಗುತ್ತಿದೆ. ಟ್ರಿಟ್ಮೆಂಟ್ ಸಹ ನಡೆಯುತ್ತಿದೆ. 50 ಪಂಚಾಯತ ಟಿಬಿ ಮುಕ್ತ ಪಂಚಾಯತ ಆಗುತ್ತಿವೆ. ಟಿಬಿ ಸಹ ಕೋವಿಡ್ ನಂತೆ ಹರಡುವ ಸಂಕ್ರಾಮಿಕ ಕಾಯಿಲೆ. ಇದನ್ನು ತಡೆಯಲು ಅಗತ್ಯ ಕ್ರಮ ನಡೆಯುತತಿ. ಇನ್ನೆರಡು ವರ್ಷದಲ್ಲಿ ಜಿಲ್ಲೆ ಟಿಬಿ ಮುಕ್ತವಾಗಲಿದೆ ಎಂದರು.  

ಮಕ್ಕಳಿಗೆ ಬಿಸಿಜಿ ವ್ಯಾಕ್ಸಿನ್ ಕೊಡಲಾಗುತ್ತಿದೆ. ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಟಿಬಿ ಕಾಯಿಲೆ ಬರದಿರಲೆಂದು ಬಿಸಿಜಿ ವ್ಯಾಕ್ಸಿನೇಷನ್ ಕಾರ್ಯಕ್ರಮ ನಡದಿದೆ. ಸಿವೈ ಟಿಬಿ ಟೆಸ್ಟ ಚಾಲನೆಯಲ್ಲಿದೆ. ಇದು ಬ್ಯಾಕ್ಟೀರಿಯಾ ಇನ್ಸಸ್ಪೆಕ್ಷನ್ ಆಗುವುದನ್ನು ತಡೆಯುತ್ತದೆ ಎಂದರು. ಡಾ.ಅಶ್ವನಿ ಬೋರಕರ್ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ, ಡಾ.ಅರ್ಚನಾ ನಾಯ್ಕ ಅಸಂಕ್ರಾಮಿಕ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.