ಆರೋಗ್ಯ ಜಾಗೃತಿ: ರಕ್ತದಾನ ಮಹಾದಾನ - ಗವಿಯಪ್ಪನವರ
ರಾಣೆಬೆನ್ನೂರು 18; ರಕ್ತದಾನದಿಂದ ಸಾಯುವ ಜೀವವನ್ನು ಉಳಿಸಬಹುದಾಗಿದೆ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ ಎಂದು ರಾ ರಾ ಕಾಲೇಜು ಶಿಕ್ಷಣ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ, ನಾಗರಾಜ ಗವಿಯಪ್ಪನವರ ಹೇಳಿದರು. ಅವರು ಕಾಲೇಜು ಭವನದಲ್ಲಿ ಭೂಗೋಳಶಾಸ್ತ್ರ ವಿಭಾಗ, ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತದಾನದಿಂದ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ದಾನ ಮಾಡಿದಷ್ಟು ಹೊಸ ರಕ್ತ ಉತ್ಪಾದನೆಯಾಗಿ ಆರೋಗ್ಯಯುತ ಬದುಕು ಸಾಗಿಸಬಹುದಾಗಿದೆ ಎಂದು ವಿವರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ, ಪ್ರೊ,ನಾರಾಯಣ ನಾಯಕ ಎ. ಅವರು, ಇಂಧನ ವಿದ್ಯಾರ್ಥಿಗಳು, ಆರೋಗ್ಯ ಜಾಗೃತಿ ಕುರಿತಂತೆ ತಮ್ಮ ಸಾಮಾಜಿಕ ಸೇವೆಯ ರೂಪದಲ್ಲಿ ಪ್ರಚಾರಪಡಿಸಬೇಕಾದ ಅಗತ್ಯವಿದ್ದು, ರಕ್ತದಾನ ನೀಡುವ ಉದ್ದೇಶ ಮತ್ತು ಅದರ ಮಹತ್ವ ಕುರಿತಂತೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ರೇಖಾ ಶಿಡೇನೂರ, ವಾಣಿಜ್ಯ ಶಾಸ್ತ್ರ ಮುಖ್ಯಸ್ಥೆ ಸುಜಾತಾ ಹುಲ್ಲೂರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕು,ಪ್ರೀತಿ ಪ್ರಾರ್ಥಿಸಿದರು. ಭೂಗೋಳಶಾಸ್ತ್ರ ಮುಖ್ಯಸ್ಥ ಎಮ್.ಎನ್. ಸೂರಣಗಿ ಸ್ವಾಗತಿಸಿದರು. ಭಾಗ್ಯವತಿ ದೇಶಪಾಂಡೆ ನಿರೂಪಿಸಿ, ಕು, ರಂಜಿತಾ ವಂದಿಸಿದರು.