ಆರೋಗ್ಯ, ಪೊಲೀಸ್ ಸಿಬ್ಬಂದಿಗೆ ಪೂರ್ಣ ವೇತನ: ಸಿಎಂ ಭರವಸೆ

ಹೈದರಾಬಾದ್, ಎಪ್ರಿಲ್ 2, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವೈದ್ಯಕೀಯ ಮತ್ತು ಆರೋಗ್ಯ ಮತ್ತು ಪೊಲೀಸ್ ನೌಕರರಿಗೆ  ಮಾರ್ಚ್ ತಿಂಗಳ ಪೂರ್ಣ ವೇತನ ನೀಡಲು ನಿರ್ಧರಿಸಿದ್ದಾರೆ.ನಿನ್ನೆ ಮಧ್ಯರಾತ್ರಿಯ ನಂತರ ಮುಖ್ಯಮಂತ್ರಿ ಕಚೇರಿಯಿಂದ ಬಿಡುಗಡೆಯಾದ  ಹೇಳಿಕೆ ಪ್ರಕಾರ ಅವರಿಗೆ  ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸಹ ನಿರ್ಧರಿಸಲಾಗಿದೆ .ಮುಖ್ಯಮಂತ್ರಿ ಪ್ರೋತ್ಸಾಹ ಧನವನ್ನು ಒಂದು ಅಥವಾ ಎರಡು ದಿನಗಳಲ್ಲಿ ಪ್ರಕಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಪ್ರಗತಿ ಭವನದಲ್ಲಿ ಇಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಅವರು ಬಗ್ಗೆ ಈ ನಿರ್ಧಾರ ಕೈಗೊಂಡಿದ್ದಾರೆ. ವೈದ್ಯಕೀಯ ಮತ್ತು ಆರೋಗ್ಯ ಸಚಿವ ಎಟೆಲಾ ರಾಜೇಂದರ್, ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್, ಪೊಲೀಸ್ ನಿರ್ದೇಶಕ ಜನರಲ್ ಮಹೇಂದರ್ ರೆಡ್ಡಿ, ಹಣಕಾಸು ಕಾರ್ಯದರ್ಶಿ ರಾಮಕೃಷ್ಣ ಅವರು ಸಭೆಯಲ್ಲಿ ಭಾಗವಹಿಸಿದ್ದರು.