ನಾಲ್ಕು ಮಕ್ಕಳಿಗೆ ಜನ್ಮವಿತ್ತ ಮಹಾತಾಯಿ

ವಿಜಯಪುರ, ಅ 19:   ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು  ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ರಾಜ್ ರತನ್ ಕಾಲೋನಿಯ 28 ವರ್ಷದ ದಲಿಬಾಯ್ ಅವರಿಗೆ ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

"ದಲಿಬಾಯಿ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು, ತಾಯಿ ಸೇರಿದಂತೆ ಎಲ್ಲಾ ಶಿಶುಗಳು ಆರೋಗ್ಯವಾಗಿವೆ " ಎಂದು ಶಸ್ತ್ರಚಿಕಿತ್ಸೆ ನಡೆಸಿದ ಸ್ತ್ರೀರೋಗ ತಜ್ಞೆ ಆಶಾ ಮಡ್ನೂರ್ ಹೇಳಿದ್ದಾರೆ. 

"ಆಸ್ಪತ್ರೆಯಲ್ಲಿ ಒಂದು ವಾರ ಶಿಶುಗಳಿಗೆ ಚಿಕಿತ್ಸೆ ನೀಡಿದ ನಂತರ ಮನೆಗೆ ಕಳುಹಿಸಲಾಗುವುದು. ತನ್ನ ನಾಲ್ಕು ಶಿಶುಗಳೂ ಆರೋಗ್ಯವಾಗಿರುವುದನ್ನು ನೋಡಿ ತಾಯಿ ನಿಜವಾಗಿಯೂ ಸಂತೋಷಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.