ಕ್ರಿಕೆಟ್ ತಂಡಕ್ಕೆ ಹಾವೇರಿ ಐವರ ಆಯ್ಕೆ

Haveri five players selected for cricket team

ಹಾವೇರಿ 22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗದಗ ಗ್ರಾಮೀಣ ಕೆ.ಎಸ್‌.ಸಿ.ಎ. ಅಂಡರ್‌-16 ಕ್ರಿಕೆಟ್ ತಂಡದ ಆಯ್ಕೆಯ ಪ್ರಕ್ರಿಯೆ ಗದಗನ ಎಚ್‌.ಕೆ. ಪಾಟೀಲ್ ಅಸ್ಫೋ ಟರ್ಫ್‌ ಮೈದಾನದಲ್ಲಿ ಏ.22ರ ಮಂಗಳವಾರ ಬೆಳಿಗ್ಗೆ ನಡೆಯಿತು.  

ಗದಗ ಜೂನಲ್ ಕೆ.ಎಸ್‌.ಸಿ.ಎ. ಅಂಡರ್‌-16 ಕ್ರಿಕೆಟ್ ತಂಡಕ್ಕೆ ಹಾವೇರಿ ಜಿಲ್ಲೆಯಿಂದ ಐವರು ಆಟಗಾರರು ಆಯ್ಕೆಯಾಗಿದ್ದಾರೆ. ಹಾವೇರಿಯ ಕ್ರಿಕೆಟ್ ಆಟಗಾರರಾದ ಲಿಂಗಾನಂದ್ ಎಸ್ ಶಿವಪುರ, ಅನುಪ್ ರೋಣಿಮಠ, ಧ್ರುವ್ ಬೆಂಗೇರಿ, ಮೊಹಮ್ಮದ್ ಅಹಮದ್ ಓಲೇಕಾರ, ಲಲಿತ್‌ಕುಮಾರ ಅವರುಗಳು ಕೆ.ಎಸ್‌.ಸಿ.ಎ. ಅಂಡರ್‌-16 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ   ಆಟಗಾರರಾಗಿದ್ದು, ಇವರುಗಳಿಗೆ ಹಾವೇರಿ ಎಂಸ್ಕೆರ್ ಎಸ್ ಕ್ರಿಕೆಟ್ ಅಕಾಡೆಮಿ ತರಬೇತುದಾರ ಅರುಣ್ ಸಾದಣ್ಣವರ್ ಮತ್ತು ಆದಿಲ್ ಸನ್ನುಖಾನವರ ತರಬೇತಿ ನೀಡಿದ್ದಾರೆ