ಕೃಷಿ ಸಮಾಜದಿಂದ ಹಾವೇರಿ ಮತ್ತು ಬ್ಯಾಡಗಿ ಶಾಸಕರಿಗೆ ಸನ್ಮಾನ
ಹಾವೇರಿ06: ಹಾವೇರಿ ತಾಲ್ಲೂಕಿನ ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿಯ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರುಗಳಾದ ನೆಹರು ಚ ಓಲೇಕಾರ ಹಾಗೂ ವಿರೂಪಾಕ್ಷಪ್ಪ ರು.ಬಳ್ಳಾರಿ ಇವರಿಗೆ ಕೃಷಿಕ ಸಮಾಜದಿಂದ ಸನ್ಮಾನಿಸಲಾಯಿತು.
ಹಾವೇರಿ ಸಹಾಯಕ ಕೃಷಿ ನಿದರ್ೇಶಕರ ಸಭಾ ಭವನದಲ್ಲಿ ಕಳೆದ ಬುಧವಾರ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಶಾಸಕ ನೆಹರು ಚ ಓಲೇಕಾರ ಅವರು ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೇ ರೈತರು ಸಂಕಷ್ಟದಲ್ಲಿ ಇದ್ದು ಸಕರ್ಾರವು ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಶಿಸಬೇಕು ಮತ್ತು ಇತ್ತೀಚಿನ ದಿನಗಳಲ್ಲಿ ರೈತರು ಕೂಲಿ ಕಾಮರ್ಿಕರ ಸಮಸ್ಯೆಯನ್ನು ಎದುರಿಸುತ್ತಿದ್ದು ಇಲಾಖೆಯವರಿಂದ ಹೊಸ ತಂತ್ರಜ್ಞಾನದ ಮಾಹಿತಿ ಪಡೆದು ರೈತರು ಬೆಳೆಗಳನ್ನು ಬೆಳೆದು ಆಥರ್ಿಕವಾಗಿ ಸಧೃಡರಾಗುಲು ಮನವಿ ಮಾಡಿದರು.
ಬ್ಯಾಡಗಿ ಶಾಸಕರಾದ ವಿರೂಪಾಕ್ಷಪ್ಪ ರು ಬಳ್ಳಾರಿ ಅವರು ಮಾತನಾಡಿ ಆಧುನಿಕ ಕೃಷಿ ತಂತ್ರಜ್ಞಾನದ ಆಳವಡಿಕೆ ಬಗ್ಗೆ ಮಹತ್ವ ನೀಡಬೇಕಾಗಿದೆ.ಕೃಷಿಯಲ್ಲಿ ಕೂಲಿಕಾರರ ಸಮಸ್ಯೆ ಇರುವ ಪ್ರಸ್ತುತ ಸಂದರ್ಭದಲ್ಲಿ ಯಂತ್ರ ಬಳಕೆ ಹಾಗೂ ಕಳೆ ನಿಯಂತ್ರಣಕ್ಕಾಗಿ ಕೀಟ ನಾಶಕಗಳ ಉಪಯೋಗದ ಅನಿವಾರ್ಯತೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದಶರ್ಿ ಬಸವರಾಜ ಹಾದಿಮನಿ ಮಾತನಾಡಿ ಈ ಹಿಂದೆ ಕೃಷಿಕ ಸಮಾಜ ಕಟ್ಟಡ ಇಲ್ಲದೇ ರೈತಪರ ಕೆಲಸಗಳನ್ನು ಮಾಡಲು ಕೃಷಿಕ ಸಮಾಜಕ್ಕೆ ಬಹಳ ತೊಂದರೆಯಾಗಿತ್ತು, ಆದರೆ ಈಗ ಹಾವೇರಿ ತಾಲ್ಲೂಕು ಕೃಷಿಕ ಸಮಾಜವು ಸ್ವಂತ ಕಟ್ಟಡಹೊಂದಿ ರೈತಪರ ಕೆಲಸಗಳನ್ನು ಮಾಡಲು ಅನುಕೂಲವಾಗಿದೆ.
ಈಗಿರುವ ಸ್ವಂತ ಕಟ್ಟಡದ ಮೇಲೆ ಒಂದು ಕಟ್ಟಡವನ್ನು ಕಟ್ಟಿ ರೈತರಿಗೆ ತರಬೇತಿ ನೀಡಲು ಇಬ್ಬರು ಶಾಸಕರುಗಳಲ್ಲಿ ತಮ್ಮ ನಿಧಿಯಿಂದ ಆಥರ್ಿಕ ಸಹಾಯ ಮಾಡಲು ವಿನಂತಿಸಿದರು.
ಸಹಾಯಕ ಕೃಷಿ ನಿದರ್ೇಶಕರು ಹಾಗೂ ಪದನಿಮಿತ್ತ ಕಾರ್ಯದಶರ್ಿ ಕರಿಯಲ್ಲಪ್ಪ ಡಿ ಕೊರಚರ, ಅಧ್ಯಕ್ಷ ಶಿವಪತ್ರಪ್ಪ ನಿ ಶಿವಣ್ಣನವರ, ಉಪಾಧ್ಯಕ್ಷ ರುದ್ರಗೌಡ ಹತರ್ಿ, ಜಿಲ್ಲಾ ಪ್ರತಿನಿಧಿ ನಾಗಪ್ಪ ವೀ ವಿಭೂತಿ, ಖಜಾಂಚಿ ಗುಡ್ಡಪ್ಪ ಮಾಳಶೆಟ್ಟಿ, ನಿದರ್ೆಶಕರುಗಳಾದ ಬಸವಣ್ಣೇಪ್ಪ ಬಸೇಗಣ್ಣಿ, ಬಸವರಾಜ ಡೊಂಕಣ್ಣನವರ, ನಿದರ್ೇಶಕರು, ಈರಣ್ಣ ಕಳ್ಳಿಹಾಳ, ಮಲ್ಲೇಶಪ್ಪ ಮತ್ತಿಹಳ್ಳಿ, ಪ್ರಕಾಶ ಹಂದ್ರಾಳ ಚನ್ನಬಸಪ್ಪ ಅರಳಿ, ನಿದರ್ೇಶಕರು, ಹನುಮಂತಗೌಡ ಪಾಟೀಲ, ಫಕ್ಕೀರಪ್ಪ ಜಂಗಣ್ಣನವರ, ಮಲ್ಲಿಕಾಜರ್ುನ ಗುಮ್ಮಡಿಯವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 