ಲಂಡನ್, ಅ 9: ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಪೂರ್ಣವಿರಾಮ ಹಾಕಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಬ್ಯಾಟ್ಸ್ ಮನ್ ಹಾಶೀಮ್ ಆಮ್ಲಾ ಅವರು ಇಂಗ್ಲೆಂಡ್ ಕೌಂಟಿ ಆಡುವ ಸಿದ್ಧತೆಯಲಿದ್ದಾರೆ. ಇಂಗ್ಲೆಂಡ್ ನ ದೇಶೀಯ ಅಗ್ರ ಲೀಗ್ ಆದ ಕೌಂಟಿಯ ಸರ್ರೆ ತಂಡದ ಪರ ಎರಡು ವರ್ಷಗಳ ಗುತ್ತಿಗೆಗೆ ಅವರು ಸಹಿ ಮಾಡಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಪೋ ವರದಿ ಮಾಡಿದೆ. ಕೊಲ್ಪಕ್ ನೋಂದಣಿ ಅನ್ವಯ ಸಹಿ ಮಾಡಿರುವ ಅವರು, ಈ ವಾರದೊಳಗೆ ಕೌಂಟಿಗೆ ಸಹಿ ಮಾಡುವ ಕಾರ್ಯ ಅಂತ್ಯವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ತಿಂಗಳ ಮುಕ್ತಾಯಕ್ಕೆ ಕೊಲ್ಪಕ್ ಅನ್ವಯದ ಕೌಂಟಿ ನೋಂದಣಿಯ ಬ್ರೆಕ್ಸಿಟ್ ಮುಕ್ತಾಯವಾಗಲಿದೆ. ಆಮ್ಲಾ ಪ್ರತಿನಿಧಿಗಳು ಮಿಡ್ಲ್ಸೆಕ್ಸ್ ಹಾಗೂ ಹ್ಯಾಮ್ಶೈರ್ ತಂಡಗಳೊಂದಿಗೂ ಮಾತುಕತೆ ನಡೆಸಿದ್ದರು. ಮಾರ್ನ್ ಮಾರ್ಕ್ಲ್ ಈಗಾಗಲೇ ಸರ್ರೆ ತಂಡಕ್ಕೆ ಸಹಿ ಮಾಡಿದ್ದು, ಅಭಿಮಾನಿಗಳ ದೃಷ್ಟಿಯಿಂದ ಎರಡನೇ ಕೊಲ್ಪಕ್ ಆಟಗಾರನಾಗಿ ಆಮ್ಲಾ ಅವರಿಗೆ ಅವಕಾಶ ನೀಡಲಾಗಿದೆ. ರೋರಿ ಬನ್ರ್ಸ್, ಒಲ್ಲಿ ಪೋಪ್ ಹಾಗೂ ಸ್ಯಾಮ್ ಕರ್ರನ್ ದೀರ್ಘ ಅವಧಿ ಗೈರಾಗಿದ್ದರಿಂದ ಇದು ಸರ್ರ್ ತಂಡಕ್ಕೆ ಹೊಡೆತ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ಹಾಶೀಮ್ ಆಮ್ಲಾ ಅವರು ಸರ್ರ್ ಎಲ್ಲ ಪಂದ್ಯಗಳಾಡಲಿದ್ದಾರೆ ಎಂಬ ಉದ್ದೇಶದಿಂದ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಕಳೆದ ಬಾರಿ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರು ಎಲ್ಲ ಪಂದ್ಯಗಳು ಆಡಿದ್ದರು. ಆದರೆ, ಈಗ ಆಮ್ಲಾ ಅವರ ಮೇಲೆ ಇದೇ ನಿರೀಕ್ಷೆ ಇಡಲಾಗಿದೆ. 15 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ಆಡಿರುವ ಅವರು, ಟೆಸ್ಟ್ ಕ್ರಿಕೆಟ್ನಲ್ಲಿ ಒಮ್ಮೆ ತ್ರಿಶತಕ ಸಿಡಿಸಿದ್ದಾರೆ. ಹಾಶೀಮ್ ಆಮ್ಲಾ ಅವರು 124 ಟೆಸ್ಟ್ ಪಂದ್ಯಗಳಿಂದ 9,282 ರನ್, 181 ಏಕದಿನ ಪಂದ್ಯಗಳಿಂದ 8,113ರನ್ ಬಾರಿಸಿದ್ದಾರೆ.