ಹರನಾಳ ಗ್ರಾಪಂ ಪಿಡಿಒ ಸಸ್ಪೆಂಡ್, ಒಂದೇ ದಿನ ಮೂರು ಜನ ಪಿಡಿಒ ಅಮಾನತು
ದೇವರಹಿಪ್ಪರಗಿ 19 ಹರನಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸ್ಸಮ್ಮ ದೊಡಮನಿ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ರಿಸಿ ಆನಂದ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ವಿಜಯಪುರದಲ್ಲಿ ಮಂಗಳವಾರದಂದು ನಡೆದ ಸಭೆಗೆ ತಡವಾಗಿ ಆಗಮಿಸಿದ ಕೆರೂಟಗಿ ಮತ್ತು ಹಿಟ್ನಳ್ಳಿ ಹಾಗೂ ಕೊಂಡಗೂಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ ಗೆ ಸೇರಿದಂತೆ ತಾಲೂಕಿನಲ್ಲಿ ಒಂದೇ ದಿನ ಮೂರು ಜನ ಪಿಡಿಒ ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪತ್ರಿಕೆಗೆ ತಾ.ಪಂ ಇಒ ಭಾರತಿ ಚೆಲುವಯ್ಯ ಮಾಹಿತಿ ನೀಡಿದರು.ಈ ಕುರಿತು ಬುಧವಾರದಂದು ಪತ್ರಿಕೆ ಜೊತೆ ಮಾತನಾಡಿದ ಅವರು, ಹರನಾಳ ಗ್ರಾಮ ಪಂಚಾಯತ್ ಪಿಡಿಒ ಬಸ್ಸಮ್ಮ ದೊಡ್ಡಮನಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹಾಗೂ ಹಿಟ್ನಳ್ಳಿ ಹಾಗೂ ಕೆರೂಟಗಿ ಗ್ರಾಪಂ ಪಿಡಿಒ ವಿನೋದ್ ರಾಠೋಡ ಹಾಗೂ ಕೊಂಡಗೂಳಿ ಗ್ರಾಮ ಪಂಚಾಯತ್ ಪಿಡಿಒ ಸಂಜೀವ ಶೇಗುಣಶಿ ಅವರ ಮೇಲೆ ಕರ್ತವ್ಯ ನಿರ್ಲಕ್ಷ್ಯತೆ ಆರೋಪದಿಂದ ವಿಜಯಪುರ ಜಿಲ್ಲೆಯ ಜಿಪಂ ಸಿಇಒ ರಿಸಿ ಆನಂದ ಅವರು ಮಂಗಳವಾರ ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಯಾರನ್ನು ನೇಮಿಸಿದ್ದಾರೆ ಎನ್ನುವುದು ನಾಳೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ತಾಲೂಕಿನಲ್ಲಿ ಸಂಚಲನ ಉಂಟಾಗಿದೆ.