ಲೋಕದರ್ಶನ ವರದಿ
ಹರಪನಹಳ್ಳಿ 21: ಪಟ್ಟಣದ ಮೇಗಳ ಪೇಟೆಯ ಸಾರ್ವಜನಿಕರು ಕೊಟ್ಟೂರು ಸರ್ಕಲಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬಸವೇಶ್ವರ ಸರ್ಕಲ್ ಸುತ್ತಲೂ ಗೋಡೆ ಕಾಂಪೌಂಡ್ ದೊಡ್ಡದು ಆಗಿರುವುದರಿಂದ ರಸ್ತೆ ಅಪಘಾತ ಆಗುತ್ತದೆ ಎಂದು ಪುರಸಭೆಗೆ ಮನವಿ ಮಾಡಿರುವುದರಿಂದ ಬಸವೇಶ್ವರ ಸರ್ಕಲ್ ಕಾಮಗಾರಿ ಹಂತದಲ್ಲಿರುವಾಗಲೇ ಸರ್ಕಲ್ಲಿನ ಸುತ್ತಲಿನ ಕಾಂಪೌಂಡ್ ಗೋಡೆಯನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.