ಲೋಕದರ್ಶನ ವರದಿ
ಹರಪನಹಳ್ಳಿ 19: ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಿಸಿದರೆ ಸಾಲದು ಅವರು ಸಾರಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ವೈ.ಎನ್.ಗೌಡರ್ ಕುರಿಹುಣ್ಣಿ ನಿಗಮದ ಮಾಜಿ ಅದ್ಯಕ್ಷರು ಹೇಳಿದರು.
ಪಟ್ಟಣದ ತಾಲ್ಲೂಕ ಪಂಚಾಯಿತಿಯ ಸಮರ್ಥ ಸೌದದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿ, ಹಾಲುಮತ ಸಮಾಜ ಹಾಗೂ ತಾಲ್ಲೂಕು ಕುರುಬ ಸಮಾಜದ ಸಂಯುಕ್ತಾಶ್ರಯದಲ್ಲಿ ಇಂದು ಒಬ್ಬ ದಾಸ ಶ್ರೇಷ್ಠನನ್ನು ಬರೀ ಜಯಂತಿಗೆ, ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಬಾರದು, ಮಾತು ಮಲ್ಲಿಗೆಯಾಗಬೇಕು ಹೊರತು ಮೈಲಿಗೆಯಾಗಬಾರದು.ಎಂಬುದು ಕನಕದಾಸರು ಹೇಳುತ್ತಿದ್ದರು.
ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ, ಕನಕದಾಸರು, ಆನೇಕರ ಚಿತ್ರ ಪುಟದಲ್ಲಿಟ್ಟು ಪೂಜೆ ಮಾಡಿದರೆ ಸಾಲದು ಅವರ ಅಚಾರ ವಿಚಾರಗಳು ಸರ್ವ ಜನಾಂಗದ ಸುಂದರವಾದ ಭೂಪಟದಲ್ಲಿ ಪುಸ್ಪಗಳಂತೆ ಅವರ ವಿಚಾರಗಳು ನಮ್ಮ ಮನಸ್ಸಿನಲ್ಲಿ ಆಕಷರ್ಿಣೆ ಮಾಡಿವೆ ಎಂದರು. ವೈಚಾರಿಕ ಕ್ರಾಂತಿಯಾಗಬೇಕು ನಮ್ಮವರಿಗೆ ಅವರ ಭಾವನೆಗಳು ಮೂಡಬೇಕು. ಅವರ ಸಾಮಾಜಿಕ ಪ್ರಜ್ಙೆ ಬದ್ದತೆ.ಚಿಂತನೆಗಳು. ಅವರನ್ನ ವಿಶ್ವ ಮಾನವಕ್ಕೆ ಎರುಸುತ್ತವೆ. ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಹಾಲುಮತ ಸಮಾಜ ಬಾಂಧವರ ಅಭಿವೃದ್ಧಿ ಸಾಧ್ಯ ವಾಗುತ್ತದೆ. ಸಂಘಟಿತರಾಗಿದ್ದರೆ ಎಂತಹ ಕೆಲಸವನ್ನಾದರೂ ಮಾಡ ಬಹುದು ಎಂಬುದಕ್ಕೆ ಈ ಜಯಂತಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಅದ್ಯಕ್ಷರು ಹಾಗೂ ತಹಶೀಲ್ದಾರ ಡಾ.ನಾಗವೇಣಿ, ಎಚ್.ಬಿ.ಪರಶುರಾಮಪ್ಪ, ಎಲ್.ಮಂಜನಾಯ್ಕ, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಚಿಕ್ಕೇರಿ ಬಸಪ್ಪ, ವೇಂಕಟೇಶ್ ವಕೀಲರು, ಪೈಲ್ವನ್ ಗಣೇಶ್, ಜೋಗಿನರ ಭರತೇಶ್, ಕಲ್ಲೇರ್ ಬಸವರಾಜ,ಮುತ್ತಿಗಿ ಜಂಭಪ್ಪ,ತಾಲ್ಲೂಕ ಪಂಚಾಯಿತಿ ಸದಸ್ಯರಾದ ನಾಗರಾಜಪ್ಪ, ಓ.ರಾಮಪ್ಪ, ತಾ, ವಾಲ್ಮೀಕಿಸಮಾಜದ ಅದ್ಯಕ್ಷ ಕೊರಿ ಶೆಟ್ಟಿ ಉಚ್ಚಿಂಗ್ಯೆಪ್ಪ, ಶಿಕಾರಿ ಬಾಲಪ್ಪ, ಮುತ್ತಗಿರೇವಣಸಿದ್ದಪ್ಪ, ಮಡ್ಡಿನಾಗರಾಜ್. ಹಾಗೂ ತಾಲ್ಲೂಕ ಆಡಳತಾಧಿಕಾರಿಗಳು ಬಾಗವಹಿಸಿದ್ದರು.