ಲೋಕದರ್ಶನ ವರದಿ
ಹರಪನಹಳ್ಳಿ 06: 12ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಯಾಗಿತ್ತು. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ನಿಟ್ಟಿನಲ್ಲಿ ಬಸವಾದಿ ಶರಣರ ಕ್ರಾಂತಿ ನಡೆದಿತ್ತು ಎಂದು ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಮಹಾಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಾಗಳಿ ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಬುಧುವಾರ ಗಣೇಶ್, ವೀರಭದ್ರೇಶ್ವರಸ್ವಾಮಿ ಹಾಗೂ ಗೋಣಿಬಸವೇಶ್ವರಸ್ವಾಮಿ ಮೂತರ್ಿ ಪ್ರಣ ಪ್ರತಿಷ್ಠಾಪನೆಯ ಹಾಗೂ ದೇವಸ್ಥಾನದ ಕಳಸಾರೋಹಣ ಧಾಮರ್ಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಇತಿಹಾಸದಲ್ಲಿ ಲೆನಿನ್, ಪ್ರಾಂಚ್, ಮಹಾಯುದ್ದಗಳು ನಡೆದಿರುವುದು ಹೆಣ್ಣು, ಹೊನ್ನು, ರಾಜ್ಯ ವಶಪಡಿಸಿಕೊಳ್ಳುವುದಕ್ಕಾಗಿ ನಡೆದಿವೆ, ಆದರೆ ಜಗತ್ತಿನ ಎಲ್ಲಾ ಕ್ರಾಂತಿಗಳಲ್ಲಿ 12ನೇ ಶತಮಾನದ ಶರಣರ ಕ್ರಾಂತಿ ವಿಭಿನ್ನವಾಗಿತ್ತು. ಈ ಅವಧಿಯಲ್ಲಿ ಕಾಯಕದಂತೆ ಶರಣರು ಅನುಭವನ ಮಂಟಪದ ಮೂಲಕ ಶರಣರು ಕಾಯಕ, ದಾಸೋಹದಲ್ಲಿ ನಿರತರಾಗಿದ್ದರು ನಂತರ ಅನೇಕ ದಾರ್ಶನಿಕರು ಸಾಧನೆಯ ಇತಿಹಾಸ ನಿಮರ್ಾಣ ಮಾಡಿದರು ಎಂದು ಹೇಳಿದರು.
ಕಂಪ್ಯೂಟರ್ ಯುಗದಲ್ಲಿ ಧಾರ್ಮಿಕ ನೈತಿಕ ತಳಹದಿಯ ಮೇಲೆ ಸಂಸ್ಕೃತಿಯ ತೆಗೆದುಕೊಂಡು ಹೋಗುವ ದೊಡ್ಡ ಜವಾಬ್ದಾರಿ ಇದ್ದು, ಧಾರ್ಮಿಕ, ಆಧ್ಯಾತ್ಮಿಕವನ್ನು ದೂರ ಮಾಡುತ್ತಿದ್ದು ಸಂಸ್ಕೃತಿ ಮರೆತು, ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದು ಇದೇ ರೀತಿ ಬದಲಾದರೆ ದೇಶಕ್ಕೂ ಉಳಿಗಾಲವಿಲ್ಲ ಎಂದು ಹಿಂದೆ ವಿವೇಕನಂದರ ಹೇಳಿಕೆಗಳನ್ನು ಸ್ಮರಿಸಿದರು.
ಧರ್ಮ ಸಭೆಗೂ ಮೊದಲು ಶ್ರೀ ಗಣೇಶ ಮೂರ್ತಿ, ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಶ್ರೀ ಗೊಣಿಸಬಸವೇಶ್ವರ ಮೂತರ್ಿಗಳ ಪ್ರಾಣ ಪ್ರತಿಷ್ಠಾಪನೆಯನ್ನು ಸಕಲ ವಾದ್ಯಗಳ ಮೂಲಕ ಗ್ರಾಮದಲ್ಲಿ ಕುಂಭಮೇಳದೊಂದಿಗೆ ಮೇರವಣಿಗೆ ನಡೆಸಿ, ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸಾನಿಧ್ಯದಲ್ಲಿ ಹೆಚ್.ಕೊಟ್ರೇಶ್, ವೈ.ಎಂ.ನಾಗರಾಜಶಾಸ್ತ್ರೀ ಇವರ ಪೌರೋಹಿತ್ಯದಲ್ಲಿ ನೇರವೇರಿತು.
ಈ ಸಂದರ್ಭದಲ್ಲಿ ಕೂಲಹಳ್ಳಿ ಸಂಸ್ಥಾನಮಠದ ಶ್ರೀ ಪಟ್ಟದ ಚಿನ್ಮಯಿ ಸ್ವಾಮಿಗಳು, ವಿಎಸ್ಎಸ್ಎನ್ ಅಧ್ಯಕ್ಷ ಚಿದಾನಂದಪ್ಪ, ಪಿಕಾರ್ಡ ಬ್ಯಾಂಕ ನಿದರ್ೇಶಕ ಕೆ.ಭರ್ಮನಗೌಡ, ಚಿನ್ನಪ್ಪ, ಗ್ರಾಪಂ ಉಪಾಧ್ಯಕ್ಷ ಶಿವಕುಮಾರ, ಕೊಟ್ರೇಶಪ್ಪ ಬಾಗಳಿ, ವಿ.ವಿ.ಮಲ್ಲೇಶ್, ಅರಸಿಕೇರಿ ಮಂಜಪ್ಪ, ನಾರಪ್ಪ, ಶಿವಮೂರ್ತಪ್ಪ, ಮಠದ ಬಸಪ್ಪ, ಚಿಕ್ಕಹಳ್ಳಿ ಮಂಜುನಾಥ, ಸಿದ್ದಪ್ಪ, ಎನ್.ಮಂಜುನಾಥ, ಕೆ.ಭೀಮಪ್ಪ, ಬಿ.ಸಣ್ಣ ಹನುಮಂತಪ್ಪ, ಮಸಲವಾಡದ ರಾಮಪ್ಪ, ನಾಗರಾಜ, ಯವರಾಜ, ಚಿಕ್ಕಹಳ್ಳಿ ನಾಗಪ್ಪ, ಧ್ಯಾಮನಗೌಡ್ರು, ವಿ.ಬಿ.ವಿರೇಶ್, ಶಂಕ್ರಪ್ಪ, ಅಜ್ಜಪ್ಪ, ರೇಣುಕಪ್ಪ, ರಾಜಶೇಖರ, ಬಾಗಳಿ ಕಟ್ಟೇಮನೆ ದೈವಸ್ಥರು ಹಾಗೂ ಗ್ರಾಮಸ್ಥರು, ಯುವಕ ಸಂಘದವರು, ಸೇರಿದಂತೆ ಇತರರು ಇದ್ದರು.