ಲೋಕದರ್ಶನ ವರದಿ
ಹರಪನಹಳ್ಳಿ 31: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ವಗರ್ಾವಣೆಯನ್ನು ಖಂಡಿಸಿ ವಸತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿಕೊಂಡು ಪ್ರತಿಭಟನೆ ಮಾಡಲಾಯಿತು.
ತಾಲೂಕಿನ ಮಾಚಿಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮುಂದುಗಡೆ ಬುಧವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿಗಳಾದ ವಿ.ಕೆ.ಪ್ರಸನ್ನ ಕುಮಾರ ಪ್ರತಿಭಟನೆಯಲ್ಲಿ ನಿರತ ವಿದ್ಯಾರ್ಥಿನಿಯರನ್ನು ಕುರಿತು ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಲ್ಲಿ ಸಾಧನೆಗೆ ಬೇಕಾದ ಮಾರ್ಗವನ್ನು ಅನುಸರಿಸಬೇಕು ಸಣ್ಣ ಪುಟ್ಟ ವಿಷಯಗಳಿಗೆ ಗಮನಹರಿಸುವುದು ಸೂಕ್ತವಲ್ಲ ಎಂದರು.
ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಕೆ.ಕುಮಾರ ಮಾತನಾಡಿ ಶಿಕ್ಷಕರು ಪಾಠ ಬೋಧನೆ ಸರಿಯಾಗಿ ಮಾಡದಿದ್ದರೆ ಶಿಕ್ಷಕರಿಗೆ ಹೇಳಿ ಉತ್ತಮ ಬೋಧನೆ ಮಾಡಲು ತಿಳಿಸಬಹುದು, ಒಬ್ಬ ಶಿಕ್ಷಕರನ್ನು ಗೌರವಿಸುವುದು ಉಳಿದ ಶಿಕ್ಷಕರನ್ನು ತಿರಸ್ಕಾರ ಮನೋಭಾವನೆಯಿಂದ ಕಾಣುವುದು ಸರಿಯಾದ ಕ್ರಮವಲ್ಲ, ಎಲ್ಲ ಶಿಕ್ಷಕರನ್ನು ಪೂಜ್ಯನಿಯ ಭಾವನೆಯಿಂದ ಕಾಣಬೇಕು ಎಂದರು. ಉತ್ತಮವಾಗಿ ಓದಿ ವಿಜ್ಞಾನಿ, ವೈದ್ಯರಾಗಿ, ಐ.ಎ.ಎಸ್. ಕೆ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳಾಗಿ ಎಂದು ಕಿವಿಮಾತೇಳಿದರು.
ಬೇಡಿಕೆಗಳು:
ಸರಿಯಾದ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ಪ್ರಾಂಶುಪಾಲರು ಮತ್ತು ಶಿಕ್ಷಕರು ವಸತಿ ನಿಲಯದಲ್ಲೇ ಇದ್ದು ನಮ್ಮ ಯೋಗಕ್ಷೇಮ ವಿಚಾರಿಸಬೇಕು, ವಿಜ್ಞಾನ ಮತ್ತು ಗಣಿತ, ತಂತ್ರಜ್ಞಾನದ ವಿಷಯಗಳ ಕುರಿತು ಹೆಚ್ಚಿನ ಜ್ಞಾನ ನೀಡುವಂತಾಗಬೇಕು, ಶೌಚಾಲಯಕ್ಕೆ ಡೋರ್ ಮತ್ತು ಮೇಲ್ಚಾವಣಿ ಇರುವುದಿಲ್ಲ, ಡಿ ಗ್ರೂಪ್ ನೌಕರನ ಅಸಭ್ಯ ವರ್ತನೆಯನ್ನು ಸರಿಪಡಿಸಬೇಕು, ಎ.ಟಿ.ಎಲ್ ಲ್ಯಾಬ್ ಸರಿಪಡಿಸಬೇಕು, ತಿಂಗಳಿಗೆ ಒಂದು ಬಾರಿ ಪೇರೆಂಟ್ ಮೀಟಿಂಗ್ ಮಾಡಬೇಕು ಎಂದು ಬೇಡಿಕೆಗಳನ್ನು ಉಪ ವಿಭಾಗಾಧಿಕಾರಿಗಳಾದ ವಿ.ಕೆ. ಪ್ರಸನ್ನ ಕುಮಾರ್ ಮನವಿ ನೀಡಿದರು.
ವಿದ್ಯಾಥರ್ಿನಿಯಾದ ಅನುಷ ಮಾತನಾಡಿ ವಗರ್ಾವಣೆಯಾದ ಪ್ರಾಂಶುಪಾಲರನ್ನು ಪುನಃ ನಮ್ಮ ಶಾಲೆಗೆ ಮರಳಿ ನಿಯೋಜಿಸಿ ಎಂದು ಕೇಳಿಕೊಂಡಳು.
ಈ ಸಂದರ್ಭದಲ್ಲಿ ಪಿ.ಎಸ್.ಐ ಶ್ರೀಧರ್, ಎ.ಎಸ್.ಐ ಅಪ್ಪಣ್ಣ ರೆಡ್ಡಿ, ಪೇದೆಗಳಾದ ತಿಮ್ಮಣ್ಣ, ಮಲ್ಲೇಶ್, ಅಜ್ಜಪ್ಪ, ಹಾಗೂ ಪೋಷಕರು ಮತ್ತಿತರರಿದ್ದರು