ಹರಪನಹಳ್ಳಿ: ಬಯಲು ಜಂಗಿ ಕುಸ್ತಿ ಕಾರ್ಯಕ್ರಮ

ಲೋಕದರ್ಶನ ವರದಿ

ಹರಪನಹಳ್ಳಿ 14: ಪಟ್ಟಣದ ವಾಲ್ಮೀಕಿ ನಗರದಲ್ಲಿ ಶ್ರೀ ಹಾಲಸ್ವಾಮಿ ಜಾತ್ರೆ ಪ್ರಯುಕ್ತ ಅ.12 ರಂದು ನಡೆದ ಬಯಲು ಜಂಗಿ ಕುಸ್ತಿಯಲ್ಲಿ 65 ಜೋಡಿಗಳು ಸ್ಪರ್ಧಿಸಿದ್ದಾರೆ. 

ಅಖಾಡ ಪೂಜೆಯನ್ನು ಸಣ್ಣ ಹಾಲಸ್ವಾಮಿಗಳು ನೆರವೇರಿಸಿ ಚಾಲನೆ ನೀಡಿದರು. ಪಟ್ಟಣದ ಸಂಡೂರು ಕೇರಿ ಗರಡಿಯ ಕಿರಣ ಪೈಲ್ವಾನ್ ಹಾವೇರಿ ಜಿಲ್ಲೆಯ ಕಡಕೋಳ ಗ್ರಾಮದ ಮಹೇಶ್ ಪೈಲ್ವಾನ್ ವಿರುದ್ಧ ಅತ್ಯಾಕರ್ಷಕವಾಗಿ ಸೆಣೆಸಿ ನಗದು ರೂ.10 ಸಾವಿರ ಹಾಗೂ ಟ್ರೋಫಿಯನ್ನು ಗೆದ್ದು ಕುಸ್ತಿ ಪ್ರೇಮಿಗಳನ್ನು ರಂಜಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಹಾಲಿ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮಾಜಿ ಸದಸ್ಯ ಮ್ಯಾಕಿ ದುರುಗಪ್ಪ, ಮುಖಂಡರಾದ ಮ್ಯಾಕಿ ಸಣ್ಣ ಹಾಲಪ್ಪ, ಎಲ್ಲಜ್ಜಿ ಅಂಜೀನಪ್ಪ, ಕಮ್ಮಾರ ಸಣ್ಣ ಹಾಲಪ್ಪ, ಗಟೀನ ಬಸಪ್ಪ, ಗಿಡ್ಡಹಳ್ಳಿ ಪರಸಪ್ಪ, ತಳವಾರ ಅಜ್ಜಯ್ಯ, ದ್ಯಾಮಜ್ಜಿ ಹನುಮಂತಪ್ಪ, ಕವಸರ ಮಹಾಬಲೇಶ್ವರ, ಮಂಡಕ್ಕಿ ಶ್ರೀಕಾಂತ, ತಳವಾರ ವೆಂಕಟೇಶ್, ಜಂಗ್ಲಿ ರವಿ, ರಾಯದುರ್ಗದ ವಾಗೀಶ್, ನಾಗರಾಜ ಜೈನ್ ಇತರರು ಭಾಗವಹಿಸಿದ್ದರು.