ಲೋಕದರ್ಶನ ವರದಿ
ಹರಪನಹಳ್ಳಿ 16: ತಾಲೂಕಿನಲ್ಲಿ ಇರುವ ಚಕ್ ಪೋಸ್ಟಗಳಲ್ಲಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿರುವುದು ಹರಪನಹಳ್ಳಿ ಮತ್ತು ಹಡಗಲಿ ಮಾರ್ಗದಲ್ಲಿನ ಕಾನಹಳ್ಳಿ ಚಕ್ ಪೋಸ್ಟನಲ್ಲಿ ಕಂಡು ಬಂದಿತು. ಚಕ್ಪೋಸ್ಟನಲ್ಲಿ ಮೂರು ಸಿಪ್ಟ್ನ ಬ್ಯಾಚ್ ಒಂಭತ್ತು ಜನರಿರುತ್ತಾರೆ ಒಂದೊಂದು ಸಿಪ್ಟ್ನ ಬ್ಯಾಚನಲ್ಲಿ ಮೂರು ಜನ ಅಧಿಕಾರಿಗಳು ಇರುತ್ತಾರೆ. ಎಸ್ಎಸ್ಟಿ ಅಧಿಕಾರಿ ಒಬ್ಬರು, ಎಸ್ಎಸ್ಟಿ ಅಸಿಸ್ಟೆಂಟ್ ಆಧಿಕಾರಿ ಒಬ್ಬರು, ಮತ್ತು ಪೋಲಿಸ್ ಸಿಬ್ಬಂದಿ ಒಬ್ಬರು ಲೊಕಸಭಾ ಚುನಾವಣೆ ಮುಗಿಯುವವರೆಗೂ ಪ್ರತಿದಿನ ಎಲ್ಲಾ ರೀತಿಯ ವಾಹನಗಳನ್ನು ತಪಾಷಣೆಯನ್ನು ಜವ್ದಾರಿಯಿಂದ ಮಾಡಲು ಸೂಚಿಸಿದ್ದಾರೆ.
ವಿಶೇಷ ವಾಹನಗಳಾದ ಸರಕಾರಿ ಆಧಿಕಾರಿಗಳ ವಾಹನ, ಅಂಬ್ಯುಲೈನ್ಸ್ ಪತ್ರಿಕೆ ಟಿವಿ ಮಾದ್ಯಮಗಳ ವಾಹನ, ಮತ್ತು ವಿಐಪಿಗಳ ವಾಹನಗಳನ್ನು ವಿಶೇಷವಾಗಿ ತಪಾಷಣೆಮಾಡಲು ಕಟ್ಟನಿಟ್ಟದಾ ಆದೇಶವಾಗಿದೆ ಎಂದರು.
ಎಲ್ಲಾ ಚಕ್ ಪೋಸ್ಟಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿದಿನ ಮಿನಿವಿಧಾನಸೌಧದಿಂದ ಚಕ್ ಪೋಸ್ಟಗಳಿಗೆ ಸರಕಾರಿ ವಾಹನದ ವ್ಯೆವಸ್ಥೆ ಮಾಡಲಾಗಿದ ಎಂದು ಕಾನಹಳ್ಳಿ ಚಕ್ ಪೋಸ್ಟನಲ್ಲಿ ಕಾರ್ಯನಿರತ ಸಿಬ್ಬಂದಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸರಕು ತುಂಬಿದ ಲಾರಿಯನ್ನು ತಪಾಷಣೆ ಮಾಡುತ್ತಿರುವ ಅಧಿಕಾರಿಗಳು ಎಸ್ಎಸ್ಟಿ ಅಧಿಕಾರಿ ಕೆಎನ್.ಹನುಮಂತರಾಯಪ್ಪ, ಎಸ್ಎಸ್ಟಿ ಅಧಿಕಾರಿ ಬಸವರಾಜ್ ಎನ್ಜಿ, ಪೊಲೀಸ್ಸಿಬ್ಬಂದಿ ಕೊಟ್ರೇಶ್ ಕೆಎಸ್, ಲಾರಿ ಚಾಲಕ ಇದ್ದರು