ಹರಪನಹಳ್ಳಿ: ಈರುಳ್ಳಿ ರಫ್ತು ನಿಷೇಧಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಲೋಕದರ್ಶನ ವರದಿ

ಹರಪನಹಳ್ಳಿ 10: ಕೇಂದ್ರ ಸರ್ಕಾರದ ವಿರುದ್ಧ ಈರುಳ್ಳಿ ರಫ್ತು ನಿಷೇಧವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿ ಸರ್ಕಾರಕ್ಕೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು. 

ಪ್ರತಿಭಟನಾಕಾರರನ್ನು ಉದ್ದೇಸಿಸಿ ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯದ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ ರಾಜ್ಯದಲ್ಲಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈರುಳ್ಳಿಯನ್ನು ರೈತರು ಬೆಳೆಯುತ್ತಿದ್ದಾರೆ, ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ ಅನಾವೃಷ್ಠಿಯಿಂದ ರೈತರ, ಕಾರ್ಮಿಕರ ಬದುಕು ಅತತಂತ್ರವಾಗಿದ್ದು ಆಳುವ ರಾಜಕೀಯ ವ್ಯಕ್ತಿಗಳು ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲವೆಂದರು. ದೇಶದ ರೈತ ಬೆಳೆದ ಬೆಳೆಗೆ ಯಾವುದೇ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ಮಾರುಕಟ್ಟೆ ಒದಗಿಸುವುದು ಮತ್ತು ವಾತಾವರಣಕ್ಕೆಅನುಗುಣವಾಗಿ ಬೆಳೆಯನ್ನು ಸಂರಕ್ಷಣೆ ಮಾಡುವುದು ಸಹ ಸರ್ಕಾರದ ಜವಾಬ್ದರಿಯಾಗಿದ್ದು ಇದರಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. 

ಪ್ರತಿಭಟನಾಕಾರರು ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಿಂದ ಹೊಸಪೇಟೆ ರಸ್ತೆ ಮಾರ್ಗವಾಗಿ ಐ.ಬಿ.ವೃತ್ತಕ್ಕೆ ಆಗಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಸಭೆ ನಡೆಸಿದ ರೈತ ಮುಖಂಡರು ಮಾತನಾಡಿದರು. 

ಈರುಳ್ಳಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು, ಸಂರಕ್ಷಣೆಗೆ ಗೋದಾಮು ನಿಮರ್ಿಸಬೇಕು, ಬೆಲೆ ಸಿಗದಿದ್ದರೆ ಸರ್ಕಾರ ಮದ್ಯ ಪ್ರವೇಶಿಸಬೇಕು, ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮತಿ ಸೇರಿದಂತೆ ಇತರೆ ಬೇಡಿಕೆಗಳ ಕುರಿತು ಮನವಿಯನ್ನು ಸಕರ್ಾರಕ್ಕೆ ಸಲ್ಲಿಸಿದರು. 

     ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದಶರ್ಿ ಎಸ್.ಎಂ.ಸಿದ್ದೇಶ್, ಅಡಿವೆಪ್ಪ, ನಾಗಭೂಷಣ, ಸೇರಿದಂತೆ ವಿವಿಧ ತಾಲ್ಲೂಕುಗಳ ಈರುಳ್ಳಿಬೆಳೆಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.