ಹರಪನಹಳ್ಳಿ: ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ 50 ಶೇಕಡಾ ಮೀಸಲಾತಿ ನೀಡಬೇಕು: ಎಂ.ಪಿ.ಲತಾ ಹೇಳಿಕೆ

ಲೋಕದರ್ಶನ ವರದಿ

ಹರಪನಹಳ್ಳಿ 12: ಮಹಿಳೆಯರು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ 50 ಶೇಕಡಾ ಮೀಸಲಾತಿ ನೀಡಬೇಕೆಂದು ಕಾಂಗ್ರೇಸ್ ಪಕ್ಷದ ಮುಖಂಡರಾದ ಎಂ.ಪಿ.ಲತಾ ಮಲ್ಲಿಕಾರ್ಜುನಯ್ಯ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪಟ್ಟಣದ ಅಂಬ್ಲಿ ದೋಡ್ಡ ಭರ್ಮಪ್ಪ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಎಂ.ಪಿ.ಲತಾ ಮಲ್ಲಿಕಾಜರ್ುನಯ್ಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಪುರುಷರಿಗಿಂತ ನಾವು ಕಡಿಮೆ ಇಲ್ಲ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ತಮ್ಮ ಅಸ್ಥಿತ್ವವನ್ನು ತೋರಿಸಬೇಕಾಗಿದೆ ಎಂದು ಮಹಿಳೆಯರಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ನ್ಯೂಸ್ 18 ಟಿವಿ ಚಾನಲ್ನ ನೀರೂಪಕಿ ಶಮೀತಾ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದಶರ್ಿ ಜೀಷಾನ್ ಹ್ಯಾರೀಸ್ ಅವರಿಗೆ ಬುದ್ಧನ ಪ್ರತಿಮೆ ನೀಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಎಂ.ವಿ. ಅಂಜಿನಪ್ಪ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಡಿ. ಅಬ್ದುಲ್ ರೆಹಮಾನ್ ಸಾಬ್, ವಕೀಲರಾದ ವೆಂಕಟೇಶ್,  ಪುರಸಭಾ ಸದಸ್ಸೆ  ಕವಿತಾ ಸುರೇಶ್,  ಪ್ರಾಚಾರ್ಯರಾದ ಡಾ|| ಹೆಚ್. ಮಲ್ಲಿಕಾರ್ಜುನ ಗೌಡ, ಕನ್ನಡ ಉಪನ್ಯಾಸಕರಾದ ಹೆಚ್.ಮಲ್ಲಿಕಾರ್ಜುನ್, ಆಂಗ್ಲ ಉಪನ್ಯಾಸಕರಾದ ಜಿ.ಬಿ.ನಾಗನಗೌಡ, ಕಾ.ಸಾ.ಪ. ಅಧ್ಯಕ್ಷ ರಾಮನ್ ಮಲಿ, ಮುಖಂಡರಾದ ಬಸವರಾಜಯ್ಯ, ಎಲ್.ಎಂ.ಮಂಜ್ಯಾನಾಯ್ಕ, ಇರ್ಷದ್, ರಾಯದುರ್ಗದ ವಾಗೀಶ್ ಹಾಗೂ ಕಾಲೇಜಿನ ವಿದ್ಯಾಥರ್ಿಗಳು ಮತ್ತಿತರರು ಉಪಸ್ಥಿತರಿದ್ದರು.