ನರೇಂದ್ರಮೋದಿ ಅವರಿಗೆ ಭೂತಾನ್ ಪ್ರಧಾನಿಯಿಂದ ಜನ್ಮದಿನದ ಶುಭ ಹಾರೈಕೆ

ನವದೆಹಲಿ,  ಸೆ 17   69 ನೇ  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್ ಪ್ರಧಾನಿ ಡಾ. ಲೊಟೆ ಶೆರಿಂಗ್ ಶುಭಾಶಯ ಕೋರಿದ್ದಾರೆ. 

       'ಆತ್ಮೀಯ ಮಿತ್ರ ನರೇಂದ್ರ ಮೋದಿ ಅವರ ಶುಭ ಹುಟ್ಟುಹಬ್ಬದಂದು ಅವರಿಗೆ ಉತ್ತಮ ಆರೋಗ್ಯ ಮತ್ತು  ಆಧ್ಯಾತ್ಮಿಕ ಶಕ್ತಿ ಈಡೇರಿಕೆಗೆ ಪ್ರಾರ್ಥಿಸುತ್ತೇನೆ. ಭೂತಾನ್ ಜನರ ಪರವಾಗಿ ಮೋದಿಯವರಿಗೆ ಶುಭ ಹಾರೈಕೆಗಳು.' ಎಂದು ಡಾ.ಶೆರಿಂಗ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.    

       ಹುಟ್ಟು ಹಬ್ಬದ ದಿನದಂದು ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತ್ಗೆ ಭೇಟಿ ನೀಡಿದ್ದಾರೆ.  ಕೆವಾಡಿಯಾದ ಸರ್ದಾರ್  ಸರೋವರ್ ಅಣೆಕಟ್ಟು ಸ್ಥಳದಲ್ಲಿ ನರ್ಮದಾ ನದಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ಬೆಳಿಗ್ಗೆ ಕೆವಾಡಿಯಾ ತಲುಪಿದ ಪ್ರಧಾನಿಯವರು, ಏಕತಾ ಪ್ರತಿಮೆಯ ಸಮೀಪದಲ್ಲಿರುವ ಏಕತಾ ಉದ್ಯಾನವನಕ್ಕೆ ಭೇಟಿ ನೀಡಿದರು. ಖಲ್ವಾನಿ  ಪರಿಸರ ಪ್ರವಾಸೋದ್ಯಮ ತಾಣವಾದ ಕೆವಾಡಿಯಾದ ಚಿಟ್ಟೆ ಉದ್ಯಾನಕ್ಕೂ ಭೇಟಿ ನೀಡಿದ ಪ್ರಧಾನಿ, ಕೆವಾಡಿಯಾದ ಜಂಗಲ್ ಸಫಾರಿ ಆನಂದಿಸಿದರು. 

ಪ್ರಧಾನಿಯವರ ಜನ್ಮದಿನದ ಅಂಗವಾಗಿ ದೇಶ ವಿದೇಶದ ಗಣ್ಯರು ಅವರಿಗೆ ಶುಭಕೋರಿದ್ದಾರೆ.