ಸಂಬರಗಿ 17 : ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಇರುವ ಜಂಬಗಿ ಗ್ರಾಮದ ಹೊರ ವಲಯ ಮಾಳಿ ನಗರ ಬಡಾವಣೆಯಲ್ಲಿ ಎಪ್ರೀಲ್ 12 ರಿಂದ ಹನುಮಾನ ಜಯಂತಿಯ ನಿಮಿತ್ಯವಾಗಿ ಪ್ರೌಢಶಾಲಾ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜನರಲ್ ನಾಲೇಡ್ಜ್ ಸ್ಪರ್ಧಾ ಪರೀಕ್ಷೆ ಏರಿ್ಡಸಲಾಗಿದೆ ಎಂದು ಆಂಜನೇಯ ಟ್ರ್ಯಾವಲ್ಸ್ ವ್ಯವಸ್ಥಾಪಕರಾದ ರಾಹುಲ ದಾದಾ ಸೂರ್ಯವಂಶಿ ಮಾಹಿತಿ ನೀಡಿದ್ದಾರೆ.
ಆಂಜನೇಯ ಟ್ರ್ಯಾವಲ್ಸ ಜಂಬಗಿ ಗ್ರಾಮದ ಕಾರ್ಯಾಲಯದಲ್ಲಿ ಮಾಹಿತಿ ನೀಡಿ ಮಾತನಾಡಿ ಪರೀಕ್ಷೆ ಎಪ್ರೀಲ್ 12 ರಂದು ಹನುಮಾನ ದೇವಸ್ಥಾನ ಭವನದಲ್ಲಿ ನಡೆಯುತ್ತಿದ್ದು, ಈ ಸ್ಪರ್ದೆಯಲ್ಲಿ ಭಾಗಿಯಾಗುವ ಬೆಳಗಾವಿ ಜಿಲ್ಲೆಯ ಪ್ರೌಢ ಶಾಲೆ ವಿದ್ಯಾರ್ಥಿಗಳು ತಮ್ಮ ಪ್ರೌಢ ಶಾಲೆಯಿಂದ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಆಂಜನೇಯಾ ಟ್ರ್ಯಾವಲ್ಸ್ ವಾಟ್ಸಪ್ ನಂಬರ 9916565647 ತಮ್ಮ ಯಾದಿಯನ್ನು ಈ ನಂಬರಿಗೆ ಕಳುಹಿಸಬೇಕು. ಪರೀಕ್ಷೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುತ್ತದೆ. ಪರೀಕ್ಷೆ ನೂರು ಮಾರ್ಕ್ಸ್‌ದ್ದಾಗಿರುತ್ತದೆ ಮತ್ತು ಒಂದು ಗಂಟೆಯ ಕಾಲ ನಡೆಯುತ್ತದೆ.
ಈ ಸ್ಪರ್ದೆಯಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗೆ ಪ್ರಥಮ ಬಹುಮಾನ 25 ಸಾವಿರ ರೂಪಾಯಿ, ದ್ವೀತಿಯ ಬಹುಮಾನ 15 ಸಾವಿರ ರೂಪಾಯಿ, ತೃತಿಯ ಬಹುಮಾನ 10 ಸಾವಿರ ರೂಪಾಯಿ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಹಣ, ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು ಎಪ್ರೀಲ್ 8ರ ವಳಗೆ ತಮ್ಮ ಪ್ರೌಢ ಶಾಲೆಯಿಂದ ಹೆಸರನ್ನು ನೊಂದಾಯಿಸಬೇಕು. ಪರೀಕ್ಷೆ ಕನ್ನಡ ಹಾಗೂ ಇಂಗ್ಲೀಷ ಭಾಷೆಯಲ್ಲಿ ಇರುತ್ತದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಹುಲ್ ದಾದಾ ಸೂರ್ಯವಂಶಿ ಮೋಬೈಲ್ ನಂ: 9740153164 ಹಾಗೂ ಶ್ರೀಕಾಂತ ಸೂರ್ಯವಂಶಿ ಮೋಬೈಲ್ ನಂ: 9916565647, ಆಂಜನೇಯಾ ಟ್ರ್ಯಾವಲ್ಸ್ ಗಣಪತಿ ಮಂದಿರ ಹತ್ತಿರ, ಮಿರಜ ರೋಡ ಅಥಣಿ, ಇವರನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.