ಹ್ಯಾಮಿಲ್ಟನ್ ಆರನೇ ಬಾರಿ ಚಾಂಪಿಯನ್

ಮಾಸ್ಕೊ, ನ.4:   ಯುಎಸ್ ಗ್ರ್ಯಾಂಡ್ ಪ್ರಿ ಫಲಿತಾಂಶದ ಬಳಿಕ ಸ್ಟಾರ್ ಚಾಲಕ್ ಮರ್ಸ್ಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರು ವೃತ್ತಿ ಜೀವನದಲ್ಲಿ ಆರನೇ ಬಾರಿಗೆ ಫಾರ್ಮುಲಾ ಒನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.     ಹ್ಯಾಮಿಲ್ಟನ್ ಅವರು ಸತತ ಮೂರನೇ ವರ್ಷ ಹ್ಯಾಮಿಲ್ಟನ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಹ್ಯಾಮಿಲ್ಟನ್ ಅವರು ಅರ್ಜೆಂಟೀನಾದ ಜುವಾನ್ ಮ್ಯಾನುಯೆಲ್ ಅವರ ಸಾಧನೆಯನ್ನು ಅಳಿಸಿ ಹಾಕಿದ್ದಾರೆ. ಇವರು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಪಟ್ಟಿಯಲ್ಲಿ ಜರ್ಮನಿಯ ಮೈಕೆಲ್ ಶೂಮೇಕರ್ ಮೊದಲಿಗರಾಗಿ ಕಾಣಿಸಿಕೊಳ್ಳಲಿದ್ದು, ಏಳು ಬಾರಿ ಚಾಂಪಿಯನ್ ಪಟ್ಟ ಅಲಂಕಿರಿಸಿದ್ದರು.     ಯು.ಎಸ್ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಫಿನ್ ಲ್ಯಾಂಡ್ ನ ವಾಲ್ಟೆರಿ ಬಾಟಾಸ್ ಮೊದಲ ಸ್ಥಾನವನ್ನು ಅಲಂಕರಿಸಿದರು. ಇವರು ನಿಗದಿತ ಲ್ಯಾಪ್ ಗಳನ್ನು 1 ಗಂಟೆ 33 ನಿಮಿಷ 55.653 ಸೆಕೆಂಡ್ ಗಳಲ್ಲಿ ದೂರವನ್ನು ಕ್ರಮಿಸಿದರು. ಎರಡನೇ ಸ್ಥಾನವನ್ನು ಹ್ಯಾಮಿಲ್ಟನ್ ಪಡೆದರೆ, ಬೆಲ್ಜಿಯಂನ ಮ್ಯಾಕ್ಸ್ ವಸ್ರ್ಟಪ್ಪೆನ್ ಮೂರನೇ ಸ್ಥಾನ ಪಡೆದರು.     ಹ್ಯಾಮಿಲ್ಟನ್ ಆರು ವಿಶ್ವ ಪ್ರಶಸ್ತಿಗಳಲ್ಲಿ ಐದು (2014, 2015, 2017, 2018 ಮತ್ತು 2019) ಗೆದ್ದಿದ್ದಾರೆ.