ಸೂರತ್, .25 ಯುವ ಆಟಗಾರ ದೇವದತ್ ಪಡಿಕ್ಕಲ್ (57) ಹಾಗೂ ರೋಹನ್ ಕದಂ (71) ಅವರ ಅರ್ಧಶತಕದ ನೆರವಿನಿಂದ ಕನರ್ಾಟಕ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂನರ್ಿಯ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ 20 ಓವರ್ ಗಳಲ್ಲಿ 6 ವಿಕೆಟ್ ಗೆ 171 ರನ್ ಕಲೆ ಹಾಕಿದ್ದು, ಮುಂಬೈ ತಂಡಕ್ಕೆ ಸ್ಪಧರ್ಾತ್ಮಕ ಗುರಿ ನೀಡಿದೆ. ಮೊದಲು ಬ್ಯಾಟ್ ಮಾಡಿದ ಕನರ್ಾಟಕ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರರಾದ ಕೆ.ಎಲ್ ರಾಹುಲ್ (0), ಕರುಣ್ ನಾಯರ್ (8) ಹಾಗೂ ಮನೀಷ್ ಪಾಂಡೆ (4) ರನ್ ಕಲೆ ಹಾಕುವಲ್ಲಿ ಎಡವಿದರು. 19 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ದೇವದತ್ ಹಾಗೂ ಕದಂ ಆಸರೆಯಾದರು. ಈ ಜೋಡಿ 9 ಓವರ್ ಗಳಿಗೂ ಹೆಚ್ಚು ಹೊತ್ತು ಕ್ರಿಸ್ ನಲ್ಲಿದ್ದು ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡಿದರು. ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ದೇವದತ್ 34 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿ ಔಟ್ ಆದರು. ರೋಹನ್ ಕದಂ 47 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 71 ರನ್ ಬಾರಿಸಿ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಮುಂಬೈ ಪರ ಶಾದರ್ೂಲ್ ಠಾಕೂರ್ ಹಾಗೂ ಶಿವಮ್