ಲೋಕದರ್ಶನ ವರದಿ
ಸಿದ್ದಾಪುರ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಅರಣ್ಯ ಇಲಾಖೆ,ಸರ್ಕಾರಿ ಪದವಿಪೂರ್ವ ಕಾಲೇಜು ಹಲಗೇರಿ, ಸಿದ್ದಾಪುರ, ಇವರ ಸಹಯೋಗದೊಂದಿಗೆ, ಗುರುವಾರ ಸರ್ಕಾರಿ ಪದವಿಪೂರ್ವ ಕಾಲೇಜು ಹಲಗೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರು ಮತ್ತು ತಾ.ಕಾ.ಸೇ.ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಸಿದ್ದರಾಮ ಎಸ್. ಮಾತನಾಡಿ ಪರಿಸರವು ಮಾನವನ ಅತಿಯಾದ ಹಸ್ತಕ್ಷೇಪದಿಂದ ಮಲಿನವಾಗುತ್ತಿದೆ. ಪರಿಸರ ಸಂರಕ್ಷಣೆಯು ನಮ್ಮ ಮೂಲಭೂತ ಕರ್ತವ್ಯ ಕೂಡ ಆಗಿರುತ್ತದೆ. ಪ್ರಾಕೃತಿಕ ಸಮತೋಲನ ಕಾಪಾಡುವುದಕ್ಕೆ ಪರಿಸರ ಸಂರಕ್ಷಣೆಯೊಂದೆ ಪ್ರಮುಖ ಮಾರ್ಗವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಶೇಖರ ಹೆಚ್.ಎಸ್, ವಕೀಲರ ಸಂಘದ ಅಧ್ಯಕ್ಷರಾದ ಎಂ.ಡಿ. ನಾಯ್ಕ ,ವಲಯ ಅರಣ್ಯಾಧಿಕಾರಿ ವಾಯ್.ಕೆ,ಕಿರಣಕುಮಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಕೀಲರಾದ ಏ.ಆರ್.ನಾಯ್ಕ ಪರಿಸರ ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ದಿನೇಶ ಕೆ. ವಹಿಸಿದ್ದರು. ವಿದ್ಯಾರ್ಥಿ ಕು. ಸಿಂಚನಾ ಪ್ರಾರ್ಥಿಸಿದರು . ಕು. ನೂತನ ಸ್ವಾಗತಿಸಿದರು, ಕು. ಹೇಮಂತ ನಿರೂಪಿಸಿದರು. ಕು. ಸಂಜಯ ವಂದಿಸಿದರು. ನಂತರ ಕಾಲೇಜಿನ ಮೈದಾನದಲ್ಲಿ ಗಿಡನೆಡಲಾಯಿತು.