ಹೈಕ ಮೂಲ ನಿವಾಸಿಗಳಿಗೆ ಆದ್ಯತೆ ಕಾನೂನು ತಿದ್ದುಪಡಿ ಮಾಡಲು ಒತ್ತಾಯ

ಲೋಕದರ್ಶನ ವರದಿ

ಗಂಗಾವತಿ 14: ಹೈದ್ರಾಬಾದ ಕನರ್ಾಟಕ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.8 ರಷ್ಟು ಮೀಸಲಾತಿ ಕುರಿತಂತೆ ಇರುವ 371(ಜೆ)ಕಲಂ ತಿದ್ದುಪಡಿ ಮಾಡುವ ಅವಶ್ಯ ಇದೆ ಎಂದು ಹೈ.ಕ.ಹೋರಾಟ ಸಮಿತಿ ಸಂಚಾಲಕ ಮತ್ತು 371(ಜೆ) ಅನುಷ್ಠಾನ ಕಾವಲು ಸಮಿತಿ ಕಾರ್ಯದರ್ಶಿ  ಈ.ಧನರಾಜ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರದೇಶದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇದು ಅನುಷ್ಠಾನಗೊಳ್ಳುವಲ್ಲಿ ವಿಫಲಗೊಂಡಿದೆ ಎಂದು ತಿಳಿಸಿದರು.

ಹೈ.ಕ.ಪ್ರದೇಶ ತೀರಾ ಹಿಂದುಳಿದಿದೆ. ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತಗೊಂಡಿರುವ ಕಾರಣದಿಂದ ಕಳೆದ 6 ವರ್ಷಗಳ ಹಿಂದೆ 371(ಜೆ)ಕಲಂ ಜಾರಿಗೆ ಬಂದಿದೆ. ಇದರಿಂದ ನಮ್ಮ ಭಾಗದ ಜನರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಾಂತಿಯಾಗುತ್ತದೆ ಎಂದು ತಿಳಿದುಕೊಂಡಿದ್ದರು. ಆದರೆ ಈಗ ಭ್ರಮ ನಿರಸನವಾಗಿದೆ ಎಂದು ಹೇಳಿದರು. ಮೂಲ ನಿವಾಸಿಗಳಿಗೆ ಪ್ರಥಮ ಆದ್ಯತೆ ನೀಡಬೇಕು.  ಕಾನೂನು ತಿದ್ದುಪಡಿ ಕುರಿತಂತೆ ಕಾನೂನು ತಜ್ಞರ ಸಮಿತಿಯನ್ನು ರಚನೆ ಮಾಡುವಂತೆ ತಮ್ಮ ಹೋರಾಟ ಸಮಿತಿ ರಾಜ್ಯಪಾಲರಿಗೆ ಇಷ್ಟರಲ್ಲಿ ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

600 ಪ್ರಕರಣ ದಾಖಲು: ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟನಲ್ಲಿ 600 ಪ್ರಕರಣಗಳು ದಾಖಲಾಗಿವೆ. ತಮ್ಮ ಸಮಿತಿ 82 ಜನರ ಪರ ಸಹಕಾರ ಮಾಡಿದ ಕಾರಣದಿಂದ ಅವರ ಪರವಾಗಿ ತೀಪರ್ು ಬಂದಿದೆ. ಬೆಂಗಳೂರು ಮತ್ತು ಮೈಸೂರು ಭಾಗದ ಆಯಕಟ್ಟಿನ ಸ್ಥಳಗಳಲ್ಲಿನ, ಸಚಿವಾಲಯದ ಉದ್ಯೋಗಿಗಳು ದುರುದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸುತ್ತಿದ್ದಾರೆ. ಇದಕ್ಕೆ ಪ್ರಬಲ ಬೆಂಬಲವಾಗಿ ಐಎಎಸ್ ಮತ್ತು ರಾಜಕಾರಣಿಗಲ ಲಾಬಿ ಇದೆ. ಇದರ ಪರಿಣಾಮವಾಗಿ ಹೈ.ಕ.ಪ್ರದೇಶದ ನೌಕರರಿಗೆ ಬಡ್ತಿ ಸಿಗದಂತಾಗಿದೆ ಎಂದು ತಿಳಿಸಿದರು.

2019, ಆಗಷ್ಟ್ 6ರಂದು ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ ಶೇ.8 ರಷ್ಟು ಮೀಸಲಾತಿ ಕಾನೂನುಬದ್ದಗೊಳಿಸಿ ಎಂದು ದ್ವಿ-ಸದಸ್ಯ ಪೀಠ ಆದೇಶ ನೀಡಿದೆ. ಇದನ್ನು ಜಾರಿಗೆಗೊಳಿಸಲು ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಈಗಾಗಲೇ ಕೆ.ಎಲ್.ಇ. ಶಿಕ್ಷಣ ಸಂಸ್ಥೆ, ಮೈಸೂರು ಸುತ್ತೂರುಮಠ ಮತ್ತು ಮಣಿಪಾಲ ಸಂಸ್ಥೆಯವರು ಶೇ.8 ರ ಮೀಸಲಾತಿಗೆ ತಡೆಯಾಜ್ಞೆ ಪಡೆದಿದ್ದು ತಕ್ಷಣ ಇದನ್ನು ತೆರವುಗೊಳಿಸಲು ಸರಕಾರ ಮುಂದಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಹೈ.ಕ.ಪ್ರದೇಶದ ಜನಸಂಖ್ಯೆ ಶೇ.20 ರಷ್ಟಿದೆ. ಸರಕಾರ  ಶೇ.8 ರಷ್ಟು ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.20ಕ್ಕೆ ಹೆಚ್ಚಿಸಬೇಕು. ಕನರ್ಾಟಕ ಸಚಿವಾಲಯದಲ್ಲಿ 3900 ಜನ ನೌಕರರಿದ್ದಾರೆ. ಆದರೆ ಹೈ.ಕ.ಭಾಗದವರು ಕೇವಲ 320 ಜನ ಮಾತ್ರ ಉದ್ಯೋಗದಲ್ಲಿದ್ದಾರೆ. ಇದು ತಾರತಮ್ಯ ನೀತಿಯಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಬಡ್ತಿ ಪಡೆದುಕೊಳ್ಳುವದು ನಮ್ಮ ಮೂಲಭೂತ ಹಕ್ಕಾಗಿದೆ. ಕಾರಣ ಮೂಲ ನಿವಾಸಿಗಳಿಗೆ ಆದ್ಯತೆ ನೀಡಿ ಕಾನೂನು ತಿದ್ದುಪಡಿ ಮಾಡದಿದ್ದರೆ ತಮ್ಮ ಸಮಿತಿ ಉಗ್ರರೂಪದ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಹೋರಾಟ ಸಮಿತಿ ಸದಸ್ಯೆ, ಉಪನ್ಯಾಸಕಿ ಗೀತಾ ರಾಜೂರು ಪಾಲ್ಗೊಂಡಿದ್ದರು.