ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 19: ವಿವಿಧ ಬೇಡಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಚೇರಿಯ ಮುಂದೆ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘ ಮತ್ತು ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯಿಂದ ಸತತ ಮೂರುದಿನಗಳ ಕಾಲ ಆಹೋರಾತ್ರಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಬಿ.ಮಾಳಮ್ಮ ಮಾತನಾಡಿ, ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ಕಣ್ಣು ತೆರೆಸುವ ಸಲುವಾಗಿ ಆಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೋಂಡಿದ್ದು, ಇದರಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಮಕ್ಕಳು, ಮರಿಗಳು ಸೇರಿ ನೂರಾರು ಜನರಿದ್ದಾರೆ.
ಇಂತಹ ಮಹಿಳೆಯರಿಗೂ ಮತ್ತು ಅವರ ಮಕ್ಕಳಿಗೂ ಜೀವನದ ಭದ್ರತೆ ಕಾಡುತ್ತಿದೆ. ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಅವರ ಜೀವನ ಭದ್ರತೆಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ್, ತಾಲೂಕು ಪ್ರಧಾನ ಕಾರ್ಯದಶರ್ಿ ಎಸ್.ಜಗನ್ನಾಥ, ವಿಮೋಚನಾ ಸಂಘದ ತಾಲೂಕು ಅಧ್ಯಕ್ಷ ಬಿ.ಮೈಲಮ್ಮ, ಕಾರ್ಯದಶರ್ಿ ಪಿ.ಚಾಂದಬಿ, ಸದಸ್ಯರಾದ ಕೆ.ಅಂಜಿನಮ್ಮ, ಎ.ಹನುಮಕ್ಕ, ದೊಡ್ಡಬಸಮ್ಮ, ತಟ್ನೆಮ್ಮ, ಬಿ.ಜ್ಯೋತಿ. ಜಿ.ಆರ್.ಮಲ್ಲಮ್ಮ, ಎಚ್.ಬಸಮ್ಮ, ರಾಜೇಶ್ವರಿ, ನೀಲಮ್ಮ, ಸಮಾದೆಮ್ಮ, ಮಲಿಯಕ್ಕ ಹಾಗೂ ಅಂಜಿನಪ್ಪ ಇತರರು ಇದ್ದರು.