ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 15: ತಮ್ಮದೇ ಆದ ಕಾರ್ಯ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದುಕೊಂಡು ಸಾಧನೆಮಾಡಿದ ವಿವಿಧ ಗಣ್ಯರನ್ನು ಗುರುತಿಸುವ ಕೆಲಸ ಇಲ್ಲಿ ಆಗಿರುವುದು ಶ್ಲಾಘನೀಯ ಎಂದು ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ನ ಗೌರವ ಅಧ್ಯಕ್ಷ ರುದ್ರಾಂಬ ಎಂ.ಪಿ.ಪ್ರಕಾಶ್ ಹೇಳಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದ ಜೈ ಹನುಮ ಬಯಲು ರಂಗಮಂದಿರದಲ್ಲಿ ನಡೆದ, ಜನನಿ ಸೇವಾ ಟ್ರಸ್ಟ್ನ ದ್ವಿತೀಯ ವಾಷರ್ಿಕೋತ್ಸವ ಹಾಗೂ 'ಜನನಿ ರತ್ನ' ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋಧ್ಯಮ, ಸಾಹಿತ್ಯ, ಕ್ರೀಡೆ, ಪಕ್ಷಿ ತಜ್ಞ ಹಾಗೂ ಸಮಾಜ ಸೇವಕರನ್ನು, ಸಮಾಜದ ಎಲ್ಲಾ ಮೂಲೆಗಳಿಂದ ಶೋಧಿಸಿ ಉತ್ಕೃಷ್ಟರನ್ನು ಆಯ್ಕೆಮಾಡುವ ಮೂಲಕ ಜನನಿ ಸೇವಾ ಟ್ರಸ್ಟ್ ಪಾರದರ್ಶಕತೆ ಹೊಂದಿದೆ. ಮುಂದಿನದಿನಗಳಲ್ಲೂ ಇದೇ ರೀತಿ ಇವರ ಸಮಾಜ ಸೇವೆ ಅಡೆತಡೆಗಳಿಲ್ಲದೆ ಸಾಗಲಿ, ರಾಜ್ಯದೆಲ್ಲೆಡೆಯ ಪ್ರತಿಭಾವಂತರನ್ನು ಗುರುತಿಸಿ ಕರೆ ತರುವ ಜೊತೆಗೆ ಪ್ರೋತ್ಸಾಹಿಸುವಂತ ಕೆಲಸವಾಗಲಿ ಎಂದರು.
ಕನರ್ಾಟಕ ರಾಜ್ಯ ಬೀಜ ನಿಗಮ ನಿದರ್ೇಶಕ ಎಸ್.ರಾಜೇಂದ್ರ ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿ ಹವಾಮಾನ ವೈಪರಿತ್ಯ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರು ಮನೆಗೊಂದು ಸಸಿ ನೆಡುವ ಮೂಲಕ, ಪರಿಸರ ವೃದ್ಧಿಗೆ ಮುಂದಾಗಬೇಕು ಎಂದರು. ಸಮಾಜದಿಂದ ಏನನ್ನು ನಾವು ಗಳಿಸುತ್ತೇವೂ ಅದನ್ನು ಸಮಾಜಕ್ಕಾಗಿ ಅಲ್ಪವನ್ನು ವ್ಯಯಿಸುವುದರಿಂದ ನಮಗೆ ಆತ್ಮತೃಪ್ತಿ ಇರುತ್ತದೆ. ಆದ್ದರಿಂದ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು. ಅಂತಹವರನ್ನು ಗುರುತಿಸುವಂತ ಕೆಲಸ ಸಂಘ ಸಂಸ್ಥೆಗಳು ಮಾಡುವುದು ಪ್ರಮಾಣಿಕ ಕೆಲಸ ಎಂದರು.
ಸಂಡೂರಿನ ಶ್ರೀಪ್ರಭು ದೇವರು ಸಂಸ್ಥಾನ ಮಠದ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ, ಸಕರ್ಾರದ ಪ್ರಶಸ್ತಿಗಳು ಪ್ರಸ್ತುತ ದಿನಗಳಲ್ಲಿ ಮೌಲ್ಯಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಂತಹ ಸಂಘ ಸಂಸ್ಥೆಗಳು ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸ. ಯಾವುದೇ ಫಲಾಪೇಕ್ಷೆ ಇಲ್ಲದೆ, ಪ್ರತಿ ವರ್ಷ ಆಯಾ ಕ್ಷೇತ್ರದ ಸಾಧಕರನ್ನು ವೇದಿಕೆಗೆ ಕರೆತರುವ ಮೂಲಕ ಸನ್ಮಾನಿಸಿ ಗೌರವಿಸುವುದು ಜನನಿ ಸೇವಾ ಟ್ರಸ್ಟ್ನ ನಿವರ್ಾಜ್ಯ ಕಾಯಕವಾಗಿರುವುದು ಸಂತಸ ತಂದಿದೆ ಎಂದರು.
ವೇಳೆ ಅಕ್ಕಿ ಕೊಟ್ರಪ್ಪ ತಂಬ್ರಳ್ಳಿ ಇವರಿಗೆ 'ಜನನಿ ಸಮಾಜ ಸೇವೆ ರತ್ನ' ಬೆಂಗಳೂರಿನ ಡಾ.ಎಸ್.ಬಾಲಾಜಿಗೆ 'ಜನನಿ ಜಾನಪದ ರತ್ನ' ಸಿ.ಮಂಜುನಾಥ 'ಜನನಿ ಮಾಧ್ಯಮ ರತ್ನ' ಕೊಟ್ಟೂರಿನ ಡಾ|| ಬಿ.ಸಿ.ಮೂಗಪ್ಪ 'ಜನನಿ ವೈದ್ಯಕೀಯ ರತ್ನ' ಹುಚ್ಚೆಂಗಿದುರ್ಗದ ಕೆ.ಟಿ.ಬಸವನಗೌಡ 'ಜನನಿ ಉದ್ಯಮ ರತ್ನ' ಕುಂದಾಪುರದ ಉದಯ ಕುಮಾರ್ಗೆ 'ಜನನಿ ಹೋರಾಟ ರತ್ನ' ಹ.ಬೊ.ಹಳ್ಳಿಯ ಸುಧಾ ಚಿದಾನಂದಗೌಡರಿಗೆ 'ಜನನಿ ಸಾಹಿತ್ಯ ರತ್ನ'ಕೊಪ್ಪಳದ ಬಿನ್ನಾಳ್ನ ಜೀವನ್ ಸಾಬ್ 'ಜನನಿ ಹಾಸ್ಯ ರತ್ನ', ವಿಜಯ ಇಟ್ಟಗಿಗೆ 'ಜನನಿ ಪಕ್ಷಿತಜ್ಞ ರತ್ನ' ಹಾಗೂ ದಾವಣಗೆರೆಯ ಪಿ.ಮಂಜುನಾಥರಿಗೆ 'ಜನನಿ ಕ್ರೀಡಾ ರತ್ನ' ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಜನನಿ ಸೇವಾ ಟ್ರಸ್ಟ್ನ ಅಧ್ಯಕ್ಷ ಎ.ಕೇಶವಮೂತರ್ಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಬಾರಿಯೂ ನಮ್ಮ ಟ್ರಸ್ಟ್ನ ಬಳಗದಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಎಲ್ಲರೂ ತುಂಬು ಸಹಕಾರ ನೀಡುತ್ತಾ ಬಂದಿದ್ದು, ಹಿರಿಯರ ಆರೈಕೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜವಬ್ದಾರಿಯೊಂದಿಗೆ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ನಿಮ್ಮ ಸ್ಪೂತರ್ಿಯ ಬೆಂಬಲವೇ ನಮಗೆ ಶ್ರೀರಕ್ಷೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್, ಗ್ರಾ.ಪಂ.ಅಧ್ಯಕ್ಷೆ ಕೀರಿಬಾಯಿ, ಡಾ.ಶಾಂತಕುಮಾರಿ, ತಾ.ಪಂ.ಮಾಜಿ ಸದಸ್ಯ ನಂದಿಬಂಡಿ ಸೋಮಶೇಖರ್, ಎಲೆಗಾರ್ ಕುಬೇರಪ್ಪ, ಚಿನ್ನಪ್ಪ ಮಲ್ಕಿ ಒಡೆಯರ್, ಪ್ರಕಾಶ್ ಮಲ್ಕಿ ಒಡೆಯರ್, ಬ್ಯಾಂಕ್ ವ್ಯವಸ್ಥಾಪಕ ಶರತ್ಕುಮಾರ್, ದೀಪಿಕಾ ಇತರರು ಇದ್ದರು.