‘ಹೋಳಿ’ ಸಂಭ್ರಮದ ನಡುವೆ ದುರಂತ: ಬೆಳಗಾವಿ ಜಿಲ್ಲೆ ವಿವಿಧೆಡೆ ಐವರು ನೀರುಪಾಲು

ಬೆಳಗಾವಿ, ಮಾ 11 ಜಿಲ್ಲೆಯ ವಿವಿಧೆಡೆ ‘ಹೋಳಿ’ ರಂಗಿನ ಓಕುಳಿಯಲ್ಲಿ ಮಿಂದೆದ್ದ ಬಳಿಕ ಸ್ನಾನಕ್ಕೆ ತೆರಳಿದ್ದ ಐವರು ನೀರು ಪಾಲಾಗಿರುವ ದುರಂತ ಸಂಭವಿಸಿದೆ  ಮೃತರನ್ನು ಬೆಳಗಾವಿ ತಾಲ್ಲೂಕಿನ ಹಲಗ ಗ್ರಾಮದ ಬಾಹುಬಲಿ ಜಿ ಮಲ್ಲಶೆಟ್ಟಿ (29), ಕರಿಕಟ್ಟಿ ಗ್ರಾಮದ ಪ್ರಕಾಶ್ ಎಲ್ ಪಟ್ಟಣಶೆಟ್ಟಿ(23), ಸವದತ್ತಿ ತಾಲ್ಲೂಕಿನ ಮರಕುಂಬಿ ಹಳ್ಳಿಯ ಶಶಿಕಾಂತ್ ಆನಂದ್ ಕೋಳ್ಕರ್ (22) ಖಾನಾಪುರ ತಾಲ್ಲೂಕಿನ ವಿನಾಯಕ್ ಕುಂಬಾರ್ (25) ಮತ್ತು ರಾಯಬಾಗ ತಾಲ್ಲೂಕಿನ ಸಾಗರ್ ಯಮಾಜಿ (23) ಎಂದು ಗುರುತಿಸಲಾಗಿದೆ.  ಮಂಗಳವಾರ ಮಧ್ಯಾಹ್ನ ಹೋಳಿಯಾಡಿದ ಬಳಿಕ ಈ ಘಟನೆ ನಡೆದಿದೆ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.