ಎನ್‌ಎಸ್‌ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ವಿದ್ಯಾರ್ಥಿಗಳಿಂದ
ಗದಗ 30: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಗದಗ ಜಿಲ್ಲೆಯ ಪಿಪಿಜಿ ಕಲಾ ಮಹಾವಿದ್ಯಾಲಯ ಎನ್.ಎಸ್.ಎಸ್. ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಮಾಹಾವಿದ್ಯಾಲಯದಲ್ಲಿ ಶನಿವಾರ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2024 ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮೊಬ್ ಮೂಲಕ ಹೆಚ್.ಐ.ವಿ.ಏಡ್ಸ್ ಅರಿವು ಕಾರ್ಯಕ್ರಮ ಏರಿ್ಡಸಲಾಗಿತ್ತು.ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಅರುಂಧತಿ ಕುಲಕರ್ಣಿ ಅವರು ಮಾತನಾಡಿ ಹೆಚ್.ಐ.ವಿ. ಏಡ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಎಲ್ಲ ಯುವಕರು ಕಾಲೇಜ ವಿದ್ಯಾರ್ಥಿಗಳು ತ್ವರಿತಗತಿಯಲ್ಲಿ ಹೆಚ್.ಐ.ವಿ. ಬಗ್ಗೆ ಪ್ರಚಾರ ಮಾಡಿ, ಪ್ಲ್ಯಾಶ್ ಮೊಬ್, ಬೀದಿ ನಾಟಕ ಹಾಗೂ ಸಂಗೀತ ಕಲಾ ಪ್ರದರ್ಶನಗಳ ಮೂಲಕ ಹೆಚ್.ಐ.ವಿ. ಏಡ್ಸ್ ಅರಿವನ್ನು ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಐ.ಇ.ಸಿ. ಪ್ರಚಾರಾಂದೋಲನದ ಘೋಷವಾಕ್ಯದಂತೆ “ಸುಸ್ಥಿರ ಡಿಜಿಟಲ್ ಅಭಿವೃದ್ಧಿಗಾಗಿ ಯುಜನತೆಯ ಮುಂದಾಳತ್ವ” ಘೋಷಣೆಯಂತೆ ಯುವಕರು ಸಂಯಮದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಧೃಢ ಆರೋಗ್ಯವನ್ನು ಹೊಂದಿ ಸಮೃಧ್ದ ಭಾರತವನ್ನು ನಿರ್ಮಾಣ ಮಾಡಲು ಕೈಗೂಡಿಸಬೇಕೆಂದು ಕರೆ ನೀಡಿದರು. ಪ್ರಚಾರಾಂದೋಲನ ಮತ್ತು ಫ್ಲ್ಯಾಶ್ ಮೊಬ್‌ದ ಉದ್ದೇಶ ಹೆಚ್.ಏಡ್ಸ್. ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್.ಐ.ವಿ.ಏಡ್ಸ ತಡೆ ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ 1097, ಎಸ್,ಟಿ.ಐ. ಖಾಯಿಲೆಗಳು ಇತಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ ಎಂದು ಹೇಳಿದರು. ಆರೋಗ್ಯವಂತ ಯುವ ಸಮುದಾಯ ದೇಶದ ಸಂಪನ್ಮೂಲವಾಗಿ ದೇಶದ ಅಭಿವೃದ್ಧಿಗೆ ಹಾಗೂ ಸಮಾಜದ ಒಳಿತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಲು ತಿಳಿಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ಆರ್.ಎಸ್. ದಾನರೆಡ್ಡಿ ಮಾತನಾಡಿ ವಿದ್ಯಾರ್ಥಿಗಳು ಯವ್ವನದಲ್ಲಿ ತಮ್ಮ ಜೀವನವನ್ನು ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು.
ಫ್ಲ್ಯಾಶ್ ಮೊಬ್ ಜನಜಾಗೃತಿ ಕಾರ್ಯಕ್ರಮದಲ್ಲಿ ಡಾ. ನಿಂಗೋಜಿ, ನಾಟಕ ರಚಿಸಿ ನಿರ್ಧೇಶಿಸಿದರು. ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ರೇವಣಸಿದ್ದಯ್ಯ, ಹಾಗೂ ಎನ್,ಎಸ್.ಎಸ್ ಸ್ವಯಂ ಸೇವಕರು, ಕಾಲೇಜು ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ರವಿ ಪತ್ತಾರ ಹಾಜರಿದ್ದರು. ಪ್ರೊ.ಮಂಜುಳಾ ಹೊಂಬಾಳಿ ಸ್ವಾಗತಿಸಿದರು. ಬಸವರಾಜ ಲಾಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.