ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸರ್ವಜ್ಞ ರಂಗಮಂದಿರದಲ್ಲಿ ಮಕ್ಕಳ ಪಾಲಕರು ಗುರುನಮನ ಕಾರ್ಯಕ್ರಮ

Guru Namana program by parents of children at Sarvajna Theater of Morarji Desai Residential School

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸರ್ವಜ್ಞ ರಂಗಮಂದಿರದಲ್ಲಿ ಮಕ್ಕಳ ಪಾಲಕರು ಗುರುನಮನ ಕಾರ್ಯಕ್ರಮ

ಹಾವೇರಿ 23 : ಮಕ್ಕಳಿಗೆ ಅತಿಯಾದ ವಾತ್ಸಲ್ಯ ತೋರಬೇಡಿ, ಅಗತ್ಯಕ್ಕೆ ತಕ್ಕಂತೆ ಶಿಕ್ಷೆ ಕೊಡಿ, ಆಗ ಶಿಸ್ತು ಮೈಗೂಡುತ್ತದೆ. ಅತಿಯಾದ ವಾತ್ಸಲ್ಯದಿಂದಲೇ ಪಾಲಕರೇ ಮಕ್ಕಳ ಮೊದಲ ಶತ್ರುಗಳಾಗುತ್ತಾರೆ ಎಂಬುದನ್ನು ನೆನಪಿಡಿ ಎಂದೆನ್ನುವ ಮೂಲಕ ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ ಮಕ್ಕಳ ಅಭ್ಯುದಯಕ್ಕೆ ಶಿಕ್ಷಣದ ಪಾತ್ರವೇನೆಂದು ತಿಳಿಸಿದರು.     ತಾಲೂಕಿನ ನೆಗಳೂರು ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸರ್ವಜ್ಞ ರಂಗಮಂದಿರದಲ್ಲಿ ಮಕ್ಕಳ ಪಾಲಕರು ಭಾನುವಾರ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಒಬ್ಬ ಮಗು ಶ್ರೇಷ್ಠ ಪ್ರಜೆಯಾಗಲು ಪಾಲಕರು, ಶಿಕ್ಷಕ ಮತ್ತು ಗುಣಮಟ್ಟದ ಶಿಕ್ಷಣ ಪ್ರಮುಖವಾಗಿವೆ. ಮಕ್ಕಳಿಗೆ ಹಣದ ವ್ಯಾಮೋಹ ತೋರಬೇಡಿ. ಕಷ್ಟದ ಸೈರಣೆ, ಯಾವುದೇ ಸೌಲಭ್ಯ ಇಲ್ಲದಿರುವ ಕುರಿತಂತೆ, ಬದುಕನ್ನು ಎದುರಿಸುವ ಮನೋಸೈರ್ಯ ಬೆಳೆಸಿ. ಮಕ್ಕಳು ಯೋಗ್ಯರಾದರೆ ಸಂಪತ್ತಿನ ಅವಶ್ಯಕತೆ ಇಲ್ಲ, ಅಯೋಗ್ಯರಾದರೆ ಸಂಪತ್ತು ಉಳಿಯಲಾರದು ಸಲಹೆ ನೀಡಿದ ಅವರು, ವಿದ್ಯಾರ್ಥಿಗಳು ವಿಧೇಯರಾದರೆ ಜ್ಞಾನ ನಿಮ್ಮ ಮಸ್ತಕ ಸೇರುತ್ತದೆ. ಶಿಕ್ಷಕರಿಗೆ ವಿಧೇಯತೇ ತೋರಿದಾಗ ಮಾತ್ರ ನಿಮ್ಮ ಯಶಸ್ಸು, ಸಾಧನೆ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ತಿಳಿಹೇಳಿದರು.ಎಂದು ಸಲಹೆ ಮಾಡಿದರು.       ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಇಂಥ ಕಾರ್ಯಕ್ರಮ ಹೆಮ್ಮೆ ತರುವಂತದ್ದು. ಇದು ಇಲಾಖೆಯ ಮತ್ತು ಶಿಕ್ಷಕರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರಿ ಶಾಲೆಯೇ ಎಂಬ ಅಸಡ್ಡೆಯಿಂದ ನೋಡುವ ಸಂದರ್ಭದಲ್ಲಿ ವಸತಿ ಶಾಲೆಗಳು ಗುಣಮಟ್ಟದ ಶಿಕ್ಷಣ ನಿರ್ವಹಿಸಿ ಇಂದು ವಸತಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಶಿಕ್ಷಕರೂ ಸಂಪನ್ಮೂಲಗಳ ವ್ಯಕ್ತಿಗಳಾಗಿದ್ದಾರೆ. ಇಂದು ಪಾಲಕರೂ ಸಹ ಮಕ್ಕಳ ಮೇಲೆ ಕನಸು ಹೊಂದಿದ್ದಾರೆ. ನೀರೀಕ್ಷೆಗಳನ್ನು ಹೊತ್ತು ಬಂದಿದ್ದಾರೆ. ಅವರ ನೀರೀಕ್ಷೆ ಹುಸಿಯಾಗದಂತೆ ಅವರ ಕನಸು ನನಸಾಗಿಸುವ ಜವಾಬ್ದಾರಿ ನಮ್ಮ ಇಲಾಖೆ ಮತ್ತು ಶಿಕ್ಷಕರ ಹೊಣೆ ಹೆಚ್ಚಿಸಿದೆ. ಇಂಥ ಕಾರ್ಯಕ್ರಮಕ್ಕೆ ಪಾಲಕರು ಕೈಜೋಡಿಸಿರುವುದು ಸಂತಸ ಮತ್ತು ಶಕ್ತಿ ಇಮ್ಮಡಿಗೊಳಿಸಿದೆ ಎಂದು ಶ್ಲಾಘಿಸಿದರು.ಮುಖಂಡ ಎಂ.ಎಂ. ಮೈದೂರ ಮಾತನಾಡಿ, ಗುರುವಂದನೆ ಇದೊಂದು ಸ್ವಾಗತಾರ್ಯ ಕಾರ್ಯಕ್ರಮ. ಶಿಕ್ಷಕರ ಋಣ ತೀರಿಸುವ ಕೆಲಸ ಸಮಾಜದಿಂದ ಆಗಬೇಕಿದೆ. ಶಿಕ್ಷಕರು ಇಲ್ಲದೇ ಸಮಾಜ ಮುಂದುವರೆಯಲು ಸಾಧ್ಯವಿಲ್ಲ. ಶಾಲೆಯ ಮಕ್ಕಳೆಂದರೆ ಬೆಳಗುವ ದೀಪವಿದ್ದಂತೆ. ಅದು ಪ್ರಜ್ವಲಿಸಲು ಎಲ್ಲರೂ ಅಗತ್ಯ ಸಹಕಾರ, ನೆರವಿಗೆ ಸದಾ ಸಿದ್ದ ಎಂದರು. ಮುಂದಿನ ತಿಂಗಳಲ್ಲಿ ಶಾಲಾ ಆವರಣದಲ್ಲಿ ಹೈಮಾಸ್ಟ್‌ ಲೈಟ್ ಮತ್ತು ವಾಯವ್ಯ ದಿಕ್ಕಿಗೆ ಮುಖ್ಯ ಗೇಟ್ ಅಳವಡಿಕೆ ಕಾಮಗಾರಿ ಆರಂಭಿಸಲು ಅಗತ್ಯ ನೆರವು ನೀಡುತ್ತೇವೆ.  

ಪಾಲಕರ ವತಿಯಿಂದ ಬಸವರಾಜ ಸಣ್ಣಗೋಣಿ, ಕರಬಸಪ್ಪ ಕುಬಸದ, ಬಿದ್ದಾಡೆಪ್ಪ ದೀಪಾಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ 137ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ, ರಂಗಮಂದಿರದಲ್ಲಿ ಶಾರದಾ ಮಾತೆ ಕಲಾಕೃತಿ ಅನಾವರಣ ಹಾಗೂ ಶಾಲೆಯ ಬೋದಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಪಾಲಕರ ವತಿಯಿಂದ ಸನ್ಮಾನಿಸಿ ಗೌರವ ಸಮರ​‍್ಿಸಲಾಯಿತು.      ಪ್ರಾಚಾರ್ಯ ಎಂ.ಎಂ. ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್‌. ಯಾವಗಲ್ಲ, ಮುಖಂಡ ಹುಲ್ಲಪ್ಪ ಜಾಡರ, ಮಾಜಿ ಜಿಲ್ಲಾ ಸಮನ್ವಯಾಧಿಕಾರಿ ಶಂಭುಲಿಂಗಪ್ಪ ಹಿತ್ತಲಮನಿ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಕೆರೂರ, ನೀಲವ್ವ ಶಿಡ್ಲಣ್ಣನವರ, ಸುರೇಶ ಸಪ್ಪಣ್ಣನವರ ಮತ್ತಿತರರು ಇದ್ದರು.