ಗುಜರಾತ್ : 6 ಸಿಂಹದ ಮರಿಗಳ ಜನನ

ಜುನಾಗಡ, ಏ 06, ಇಲ್ಲಿನ ಸಕ್ಕರ್ ಬಾಗ್ ಮೃಗಾಲಯ ಹಾಗೂ ಅಂಬಾರ್ಡಿ ಸಫಾರಿ ಉದ್ಯಾನವನದಲ್ಲಿ ತಲಾ 3 ಸಿಂಹದ ಮರಿಗಳು ಸೇರಿದಂತೆ 6 ಮರಿಗಳ ಜನನವಾಗಿದೆ. ಸಕ್ಕರ್‌ಬಾಗ್ ಮೃಗಾಲಯದಲ್ಲಿ ಜನಿಸಿದ ಮೂರು ಮರಿಗಳನ್ನು ತಾಯಿ ಸಿಂಹಿಣಿ ಶುಶ್ರೂಷೆ ಮಾಡುತ್ತಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಸಿ.ವಾಸವಾಡ ತಿಳಿಸಿದ್ದಾರೆ.ಆದರೆ ಅಂಬಾರ್ಡಿಯಲ್ಲಿರುವ ತಾಯಿ ಸಿಂಹಿಣಿ ಈ ಹಿಂದೆ ಸ್ವಂತ ಮರಿಗಳನ್ನು ಕೊಂದಿದ್ದರಿಂದ, ನಾವು ಮರಿಗಳನ್ನು ಬೇರ್ಪಡಿಸಿದ್ದೇವೆ ಮತ್ತು ಅದರ ಪಾಲನೆಗಾಗಿ ಸಕ್ಕರ್‌ಬಾಗ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ, '' ಎಂದು ಅವರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಒಟ್ಟು ಒಂಬತ್ತು ಸಿಂಹ ಮರಿಗಳು ಜನಿಸಿದಂತಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 2 ರಂದು ರಾಜ್ಯದ ಅತ್ಯಂತ ಹಳೆಯ ಮೃಗಾಲಯದಲ್ಲಿ  ಎರಡು ಗಂಡು ಮತ್ತು ಒಂದು ಹೆಣ್ಣು  ಮರಿಗಳು ಜನಿಸಿದ್ದವು.