ಲೋಕದರ್ಶನವರದಿ
ಬ್ಯಾಡಗಿ೨೦: ಗುರುವಾರ ಸಂಜೆ ಲಿಂಗ್ಯೆಕ್ಯರಾಗಿದ್ದ ತಾಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರ ಸಂಸ್ಥಾನ ದಾಸೋಹಮಠದ ಹಿರಿಯ (ವೃಷಭರೂಪಿ) ಮೂಕಪ್ಪಶ್ರೀಗಳ ಅಂತ್ಯ ಸಂಸ್ಕಾರವನ್ನು ಶುಕ್ರವಾರ ಮಧ್ಯಾಹ್ನ ವೀರಶೈವ ಸಕಲ ವಿಧಿವಿಧಾನಗಳೊಂದಿಗೆ ಮಠದ ಆವರಣದಲ್ಲಿಯೇ ನೇರವೇರಿಸಲಾಯಿತು.
ಮೃತಶ್ರೀಗಳು ಸೊರಬ ತಾಲೂಕಿನ ಬೆಟ್ಟದಕುಲರ್ಿ ಗ್ರಾಮದಲ್ಲಿ ಕಳೆದ 2013 ರಲ್ಲಿ ಜನಿಸಿದ್ದರು ಬಳಿಕ 2014 ರಲ್ಲಿ ಶ್ರೀಗಳಿಗೆ ಪಟ್ಟ್ಟಾಭೀಷೇಕ ಮಾಡಲಾಗಿತ್ತು, ಒಟ್ಟು 6 ವರ್ಷಗಳ ಕಾಲ ಮಠದ ಧರ್ಮಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶ್ರೀಗಳು ಮಾ.19 ರಂದು ಗುರುವಾರ ಸೊರಬ ತಾಲೂಕಿನ ಯಮನೂರ ಗ್ರಾಮದಲ್ಲಿ ಭಿಕ್ಷಾಟನೆಗೆಂದು ತೆರಳಿದ ಸಂದರ್ಭದಲ್ಲಿ ಬೆಳಿಗ್ಗೆ 8.45 ರ ಸುಮಾರಿಗೆ ಶಿವಾಧೀನರಾಗಿದ್ದರು.
ಶ್ರೀಗಳ ಅಂತಿಮ ಯಾತ್ರೆ: ಹೂವುಗಳಿಂದ ಅಲಂಕೃತಗೊಳಿಸಿದ ಟ್ರಾಕ್ಟರ್ನಲ್ಲಿ ಶ್ರೀಗಳ ಪಾಥರ್ಿವ ಶರೀರ ಇಡಲಾಗಿತ್ತು, ಬೆಳಿಗ್ಗೆ 10 ಗಂಟೆ ಸುಮಾರಿಗೆ ಶ್ರೀಮಠದಿಂದ ಆರಂಭವಾದ ಅಂತಿಮಯಾತ್ರೆಯು, ಮಲ್ಲಿಕಾಜರ್ುನ ಸ್ವಾಮಿಗಳ ಮಠದವರೆಗೂ ಸಾಗಿತಲ್ಲದೇ ಗ್ರಾಮದೆಲ್ಲೆಡೆ ಸಂಚರಿಸಿ ಮದ್ಯಾಹ್ನ 12 ಸುಮಾರಿಗೆ ಶ್ರೀಮಠದ ಆವರಣವನ್ನು ಪ್ರವೇಶಿಸಿತು. ರಾಜ್ಯದ ವಿವಿ ಧೆಡೆಗಳಿಂದ ಆಗಮಿಸಿದ್ದ ಶ್ರೀಮಠದ ಭಕ್ತರು ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಸಿದರು.
ಪಂಚಭೂತಗಳಲ್ಲಿ ಲೀನ: ಶ್ರೀಗಳ ಅಂತ್ಯ ಸಂಸ್ಕಾರಕ್ಕಾಗಿ ಕ್ರಿಯಾ ಸಮಾಧಿಯನ್ನು ನಿಮರ್ಿಸಲಾಗಿತ್ತಲ್ಲದೆ ಹೂವು ರಂಗೋಲಿ ಹಾಗೂ ಹಣತೆಗಳೊಂದಿಗೆ ಸುಂದರವಾಗಿ ಅಲಂಕರಿಸಲಾಗಿತ್ತು, ವೀರಶೈವ ವಟುಗಳು ಮಂತ್ರಘೋಷಗಳ ನಡುವೆ ನೆರೆದಿದ್ದ ಸಾವಿರಾರು ಸಂಖ್ಯೆ ಭಕ್ತ ಸಮೂಹದೆದುರು ಸಕಲ ವೀರಶೈವ ವಿಧಿವಿಧಾನಗಳೊಂದಿಗೆ ಮಧ್ಯಾಹ್ಮ ಅಂತ್ಯ ಸಂಸ್ಕಾರ (ದಫನ ಕ್ರಿಯೆ) ಕಾರ್ಯಕ್ರಮ ನೆರವೇರಿತು.
ಪವಾಡ ಪುರುಷಶ್ರೀ: ತಮ್ಮ ಪವಾಡಗಳ ಮೂಲಕವೇ ರಾಜ್ಯದಲ್ಲಿ ತಮ್ಮದೇ ಆದ ಭಕ್ತಕೋಟಿಯನ್ನು ಹೊಂದಿದ್ದ ಶ್ರೀಗಳು ಪ್ರತಿವರ್ಷ ಜಾತ್ರಾ ಸಮಯದಲ್ಲಿ ನಡೆಯುವ ತುಲಾಭಾರ ಕಾರ್ಯಕ್ರಮದಿಂದ ಶ್ರೀಗಳ ಮಹಿಮೆ ಇಮ್ಮಡಿಗೊಂಡಿತ್ತು, ತಮ್ಮ ಪವಾಡಗಳ ಮೂಲಕವೇ ಶ್ರೀಮಠವನ್ನು ದಾಸೋಹಮಠವಾಗಿ ಪರಿವರ್ತನೆಗೊಳ್ಳಲು ಕಾರಣೀಕರ್ತರಾದ ಹಿಂದಿನ ಶ್ರೀಗಳ ಸಾಲಿಗೆ ಇಂದಿನವರು ಸೇರ್ಪಡೆಯಾದರು.
ಗಣ್ಯರಿಂದ ಅಂತಿಮ ದರ್ಶನ:
ಶ್ರೀಗಳ ಪಾಥರ್ಿವ ಶರೀರವನ್ನು ಅಂತಿಮ ದರ್ಶನಕ್ಕೆ ಶ್ರೀಮಠದಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಮಡ್ಲೂರಿನ ಮುರುಘರಾಜೇಂದ್ರ ಶ್ರೀಗಳು ಕಷ್ಣಾಪುರದ ಸೇವಾಲಾಲಶ್ರೀ, ಕೂಡಲಗುರುನಂಜೇಶ್ವರಮಠದ ಮಹೇಶ ದೇವರು, ತೊಗಸರ್ಿ ಮಳೇಮಠದ ಮಲ್ಲಿಕಾಜರ್ುನಶ್ರೀ, ಕಡೇನಂದಿಹಳ್ಳಿ ಹಿರೇಮಠದಶ್ರೀಗಳು ಸೇರಿದಂತೆ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ತಾ.ಪಂ.ಸದಸ್ಯ ಶಾಂತಪ್ಪ ದೊಡ್ಮನಿ, ಪ್ರಭುಗೌಡ್ರ ಪಾಟೀಲ, ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ಎಪಿಎಂಸಿ ಮಾಜಿ ಅಧ್ಯಕ್ಷ ಜಗದೀಶ ಕಣಗಲಭಾವಿ, ಮಾಜಿ ಉಪಾಧ್ಯಕ್ಷ ಹುಚ್ಚನಗೌಡ ಲಿಂಗನಗೌಡ್ರ, ಶಂಕರಗೌಡ ಪಾಟೀಲ ಇನ್ನಿತರ ಗಣ್ಯರು ಶ್ರೀಮಠಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.