ಸಾಮೂಹಿಕ ವಿವಾಹದ ಸಂಬಂಧ ಗಟ್ಟಿಗೊಂಡು ಆತ್ಮಸ್ತ್ರೈಯ ಹೆಚ್ಚಿಸುತ್ತವೆ : ಸಂಸದ ಬೊಮ್ಮಾಯಿ

Group marriages strengthen ties and increase self-esteem: MP Bommai

ಸಾಮೂಹಿಕ ವಿವಾಹದ ಸಂಬಂಧ ಗಟ್ಟಿಗೊಂಡು ಆತ್ಮಸ್ತ್ರೈಯ ಹೆಚ್ಚಿಸುತ್ತವೆ : ಸಂಸದ ಬೊಮ್ಮಾಯಿ  

  ಶಿಗ್ಗಾವಿ 31 : ಸಾಮೂಹಿಕ ವಿವಾಹದ ಮದುವೆಯ ಸಂಬಂಧವು ಗಟ್ಟಿಗೊಂಡು ಜೀವನದಲ್ಲಿ ಆತ್ಮಸ್ತ್ರೈಯವನ್ನು ಹೆಚ್ಚಿಸುತ್ತವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.  ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹಿರೇಮಠದಲ್ಲಿ ವಿಶ್ವಾರಾದ್ಯರ ರಥೋತ್ಸವ ಹಾಗೂ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಾಮೂಹಿಕ ವಿವಾಹವು ಅನವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದಲ್ಲದೇ ಎಲ್ಲ ಜಾತೀಯರನ್ನು ಒಳಗೊಂಡಂತೆ ಮೇಲು ಕಿಳೆಂಬ ಭಾವನೆ ಹೊಡೆದೋಡಿಸುವುದೆ ಸರ್ವ ಧರ್ಮದ ಉದ್ದೇಶವಾಗಿದೆ ಎಂದರು.   

 ಗಂಜೀಗಟ್ಟಿ ಮಠದ ವೈಜಿನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ , ಹಿರೇಮಣಕಟ್ಟಿ ಮಠದ ವಿಶ್ವಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 6 ಜೋಡಿಗಳು ತಮ್ಮ ನವ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಿಗೆ ಆರ್ಶಿವದಿಸಿ ನಂತರ ಆರ್ಶಿವಚನ ನೀಡಿದರು.  

 ಈ ಸಂದರ್ಭದಲ್ಲಿ ವೇ ಮೂ. ರೇವಣಸಿದ್ದಯ್ಯ ಸ್ವಾಮೀಜಿ, ಹಿರೇಮಠದ ನಿಯೋಜಿತ ಪಟ್ಟಾದ್ಯಕ್ಷರಾದ ವೇ. ಮೂ ಚನ್ನಯ್ಯಸ್ವಾಮಿಗಳು, ವೇ ಮೂ. ಮೃತ್ಯುಂಜಯ ಒಡಯರಮಠ ಶ್ರೀಗಳು ಉಪಸ್ಥಿತರಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಶಿಗ್ಗಾವಿ ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಶಿವಾನಂದ ಮ್ಯಾಗೇರಿ, ಮೌಲಾಸಾಬ್ ಬೆಂಡಿಗೇರಿ, ಗಂಗಣ್ಣ ಸಾತಣ್ಣವರ, ತಿಪ್ಪಣ್ಣ ಸಾತಣ್ಣವರ, ಗ್ರಾಪಂ ಅದ್ಯಕ್ಷೆ ಈರವ್ವ ಹಡಪದ, ಉಪಾದ್ಯಕ್ಷ ಚಂಬಣ್ಣ ಮ್ಯಾಗೇರಿ, ಸದಸ್ಯ ಬಸವರಾಜ ಕಣಕಟ್ಟಿ, ಫಾತೀಮಾ ತಹಶೀಲ್ದಾರ, ಅರ್ಜುನ ಹಂಚಿನಮನಿ, ಮಂಜುನಾಥ ಕಾರಡಗಿ, ರಮೇಶ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ಶಿವಾನಂದ ಸೊಬರದ, ಚಿನ್ನಪ್ಪ ಕುಂದಗೋಳ, ಬಸವರಾಜ ಗುದ್ದಲಿ, ರವಿ ಕುಡವಕ್ಕಲಗೇರ, ಶಂಕ್ರಗೌಡ್ರ ಪೋಲಿಸಗೌಡ್ರ, ಶಂಕ್ರಮ್ಮ ಹೊಸಮನಿ, ಪಕ್ಕೀರಯ್ಯ ಹಿರೇಮಠ, ವಿಶ್ವನಾಥ ಹರವಿ, ಮಂಜುಳಾ ದ್ಯಾವಣ್ಣವರ, ಹನುಮಂತಪ್ಪ ಮಂಟೂರ, ಫಯಾಜ್ ಸವಣೂರ, ಭಾಷಾಸಾಬ್ ತಹಶೀಲ್ದಾರ, ಪ್ರಶಾಂತ ಬಡ್ಡಿ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಯುವಕರು ಇದ್ದರು.