ಎಸ್‌ಸಿ,ಎಸ್‌ಟಿ ಸಮಾಜದ ಕುಂದುಕೊರತೆಗಳ ಸಭೆ

ಜಮಖಂಡಿ 31:  ನಗರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ನಡೆಸಿ ಪ್ರಕರಣವನ್ನು ದಾಖಲಿಸಲಾಗುತ್ತದೆಂದು ಶಹರ ಪೋಲಿಸ್ ಠಾಣಿ ಪಿಎಸ್‌ಐ ಅನೀಲ ಕುಂಬಾರ ಹೇಳಿದರು. 

ನಗರದ ಶಹರ ಪೋಲಿಸ ಠಾಣೆಯ ಆವರಣದಲ್ಲಿ ನಡೆದ ಎಸ್‌ಸಿ,ಎಸ್‌ಟಿ ಸಮಾಜದ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಯಾವುದೆ ದುಷ್ಚಟಗಳಿಗೆ ಬಲಿಯಾಗದೆ. ಸಮಾಜ ಮುಖಿಯಾಗಿ ಕೆಲಸಗಳನ್ನು ಮಾಡಬೇಕು. ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡಿ ಉನ್ನತ ಸ್ಥಾನದಲ್ಲಿ ಇರಬೇಕು. ತಾವುಗಳು ಹೇಳಿದ ಹಾಗಿ ಅಕ್ರಮ ದಂದೆಗಳು ಮತ್ತು ಅಕ್ರಮ ಚಟುವಟಿಗಳನ್ನು ಪತ್ತೆ ಮಾಡಿ ಅವುಗಳ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ನಗರದಲ್ಲಿ ಟ್ರಾಫೀಕ್, ಬೈಕ್‌ಪಾರ್ಕಿಂಗ್, ಮಾರುಕಟೆಯಲ್ಲಿ ಯಾವುದೇ ಟ್ರಾಫೀಕ್ ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಪೋಲಿಸ್ ಸಿಬಂದಿಗಳು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸಿಸಿ ಟಿವಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್‌ಐ ಗಂಗಾಧರ ಪೂಜಾರಿ, ಕ್ರೈಂ ಪಿಎಸ್‌ಐ ಕುಂಬಾರ ಹಾಗೂ ದಲಿತ ಮುಖಂಡರಾದ ಮುತ್ತಣ್ಣ ಮೈತ್ರಿ, ಶಶಿಕಾಂತ ತೇರದಾಳ, ರವಿ ದೊಡಮನಿ, ಅರುಣ ಲಗಳಿ, ವಿಲಾಸ ನಡುವಿನಮನಿ, ಯಶವಂತ ಕಲೂತಿ, ರವಿ ಶಿಂಗೆ, ನಾಗು ಮೀಸಿ, ಸದಾಶಿವ ಕಡಕೋಳ, ಸಂಗಮೇಶ ಕಾಂಬಳೆ, ಭರತೇಶ ಪಾನಕ್ಕನ್ನವರ, ಮುಸ್ತಾಕ ನಧಾಫ ಸೇರಿದಂತೆ ಅನೇಕ ದಲಿತಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಭಾಗಿಯಾಗಿದರು.