ಗುಜರಾತ್ನ ಕಚ್ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಗುಜರಾತ್ 31: ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಸಿಬ್ಬಂದಿ ಜೊತೆ ಗುಜರಾತ್ನ ಕಛ್ನಲ್ಲಿ ಇಂದು ಸಿಹಿ ವಿನಿಮಯ ಮಾಡಿಕೊಂಡು ಹಬ್ಬ ಆಚರಿಸಿದರು.
ಈ ವೇಳೆ ಪ್ರಧಾನಿ ಬಿಎಸ್ಎಫ್ ಯೋಧರನ್ನು ಶ್ಲಾಘಿಸಿದರು. ಅವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ಕಛ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಇಲ್ಲಿನ ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾಕ್ಕೆ ಭೇಟಿ ನೀಡಿ ಇಲ್ಲಿನ ಸೇನಾ ಜವಾನರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಲಕ್ಕಿ ನಾಲಾ ಪ್ರದೇಶವು ಸರ್ ಕ್ರೀಕ್ನ ಒಂದು ಭಾಗವಾಗಿದೆ. ಜೌಗು ಪ್ರದೇಶದಿಂದ ಕೂಡಿರುವ ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆ ನಡೆಸುವುದು ತುಂಬಾ ಸವಾಲಿನ ಸಂಗತಿ. ಈ ಪ್ರದೇಶವು ಬಿಎಸ್ಎಫ್ನ ಕಣ್ಗಾವಲಿನಲ್ಲಿದೆ.
2014 ರಲ್ಲಿ ಪ್ರಧಾನಿಯಾಗಿ ತಮ್ಮ ಮೊದಲ ದೀಪಾವಳಿ ಭೇಟಿಯಲ್ಲಿ, ಗಡಿಯಲ್ಲಿ ಸೈನಿಕರ ಸಮರ್ಪಣಾ ಮನೋಭಾವದಿಂದ ಭಾರತದ 125 ಕೋಟಿ ನಾಗರಿಕರು ನೆಮ್ಮದಿಯಿಂದ ಹಬ್ಬ ಆಚರಿಸುವಂತಾಗಿದೆ ಎಂದು ಮೋದಿ ಸಿಯಾಚಿನ್ನಲ್ಲಿ ಹೇಳಿದ್ದರು.