ಹಸಿರು ಮೇವಿನ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ

ಇಂಡಿ 16: ಇಂದಿನ ದಿನಮಾನಗಳಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಯಶಸ್ವಿಯಾಗಬೇಕಾದರೆ ಹೈನುಗಾರಿಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ಹೊಲಗದ್ದೆಗಳಲ್ಲಿ ಹೈನುಗಾರಿಕೆಯನ್ನು ಉಪಕಸಬುನ್ನಾಗಿ ಮಾಡಿಕೊಳ್ಳುದರಿಂದ ಆಥರ್ಿಕವಾಗಿ ಸಾವಲಂಬಿಗಳಾಗಲು ಸಹಕಾರಿಯಾಗುತ್ತದೆ ಎಂದು ವಿಜಯಪುರದ ಸಹ ವಿಸ್ತರಣಾ ನಿದರ್ೇಶಕರು ಆರ್.ಎ.ಆರ್.ಎಸ್ ಡಾ.ಎಸ್. ಬಿ.ಕಲಘಟಗಿ ಹೇಳಿದರು. 

  ತಾಲೂಕಿನ ಬರಗುಡಿ ಗ್ರಾಮದಲ್ಲಿ ವಿಠ್ಠಲ್ ಕಾಡಮಗೇರಿ ಅವರ ತಾಕಿನಲ್ಲಿ ಹಸಿರು ಮೇವಿನ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಸಿ ಮಾತನಾಡಿದರು. ನಿತ್ಯ ಉಪಜೀವನಕ್ಕಾಗಿ ಹೈನುಗಾರಿಕೆ ಮಾಡುವುದು ಅತಿ ಅವಶ್ಯಕವಾಗಿದ್ದು ಆ ನಿಟ್ಟಿನಲ್ಲಿ ಕಾಯರ್ೊನ್ಮೂಖರಾಗಬೇಕು ಎಂದರು.

ಮುಖ್ಯ ಅತಿಥಿಗಳಾದ ಹಿರಿಯ ವಿಜ್ಞಾನಿ ಹಾಗೂ ವಿಜಯಪುರ ಕೃಷಿ ವಿಜ್ಞಾನಕೇಂದ್ರ, ಮುಖ್ಯಸ್ಥ ಡಾ.ಎಸ್. ಎ ಬೀರಾದಾರ ಮಾತನಮಾಡಿ ಹೈನುಗಾರಿಕೆ ಬಹಳ ಮುಖ್ಯವಾದ ಉಪಕಸಬಾಗಿದ್ದು ಇದನ್ನು ಯಶಸ್ವಿ ಮಾಡಬೇಕಾದರೆ ಸಮತೋಲನ ಆಹಾರ ಅದರಲ್ಲು ಹಸಿರು ಮೇವನ್ನು ನಿಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

 ಆಯೊಜಕರಾದ ಡಾ.ಸಂತೋಷ ಶಿಂದೆ, ವಿಜ್ಞಾನಿಗಳು(ಪಶು ವಿಜ್ಞಾನ) ಮಾತನಾಡಿ ಪಶು ಪಾಲನೆಯಲ್ಲಿ ಶೇ.70ರಷ್ಟು ಖಚರ್ು ಆಹಾರದೆ ಆಗಿರುತ್ತದೆ. ಆದರೆ ಸುಧಾರಿತ ತಳಿಯ ಎಕದಳ ಮತ್ತು ದ್ವಿದಳ ಮೇವನ್ನು ಬೆಳೆದು ರಾಸುಗಳಿಗೆ ನಿಡಿದರೆ ಖಂಡಿತವಾಗಿ ಪಶು ಪಾಲನೆಯಲ್ಲಿ ಆಗುವ ಆಹಾರದ ಖರ್ಚವನ್ನು ಕಡಿಮೆ ಮಾಡಬಹುದು. ಈ ವರ್ಷ ಕೃಷಿ ವಿಜ್ಞಾನ ಕೇಂದ್ರ ಇಂಡಿ ವತಿಯಿಂದ ಸುಧಾರಿತ ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್ (ಕೋ-5) ಕಾಂಡಗಳು ಹಾಗು ಮೇವಿನ ಜೋಳ (ಕೋ. ಎಫ್.ಎಸ್. 31) ಮತ್ತು ಕುದರೆ ಮೆಂತೆ ಬೀಜಗಳನ್ನು ವರ್ಷ ವಿಡಿ ರಾಸುಗಳಿಗೆ ಹಸಿರು ಮೇವಿನ ಪೂರೈಕೆ ಮಾಡುವ ಗುರಿಯನ್ನು ಇಟ್ಟುಕೊಂಡು ಸುಮಾರು15 ರೈತರನ್ನು ಮುಂಚೂಣಿ ಪ್ರಾತ್ಯಕ್ಷತೆ ಅಂಗವಾಗಿ ವಿತರಣೆ ಮಾಡಲಾಗಿದೆ. ಹಸುಗಳಲ್ಲಿ ಹಾಲಿನ ಇಳುವರಿ ಹೆಚ್ಚಿಸಲು ಹಾಗು ಹಾಲಿನ ಗುಣಮಟ್ಟ ಕಾಪಾಡಲು ಒಟ್ಟು ಹಸಿರು ಮೇವಿನ ಪ್ರಮಾಣದಲ್ಲಿ ಶೇ. 70 ಎಕದಳ ಮೇವಾಗಿರಬೇಕು ಮತ್ತು ಶೇ.30 ದ್ವಿದಳ ಮೇವಾಗಿರಬೇಕು. ಈ ವಿಷಯವನ್ನು ಎಲ್ಲಾ ರೈತರನ್ನು ಪ್ರಚಲಿತ ಮಾಡುವ ನಿಟ್ಟಿನಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದರು.

ಇದರ ಜೊತೆಯಲ್ಲಿ ರಸಮೇವು ಎಂದರೆನು, ಯಾವ ಬೆಳೆಗಳನ್ನು ರಸ ಮೇವು ತಯಾರಿಸಲು ಉಪಯೊಗಿಸಬಹುದು, ರಸಮೇವು ಮಾಡುವ ವಿಧಾನ ಮತ್ತು ಅದರ ಮಹತ್ವದ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಲಾಯಿತು. ಗುಣಮಟ್ಟ ರಸಮೇವು ತಯಾರ ಮಾಡಲು ಏಕದಳ ಹಸಿರು ಮೇವಿನ ಬೆಳೆಗಳಾದ ಜೋಳ, ಮುಸುಕಿನ ಜೋಳ, ಸಜ್ಜೆ, ಹೈಬ್ರಿಡ ನೇಪಿಯರ ಹುಲ್ಲು, ಕಬ್ಬಿನ ವಾಡಿಯನ್ನು ಉಪಯೊಗಿಸಬಹುದು. ರಸಮೇವನ್ನು ಗುಂಡಿಗಳಲ್ಲೂ/ಬಾವಿಯಾಕಾರದ ಮಳಿಗೆ, ಟ್ರಂಚ್ಗಳಲ್ಲೂ, ಪ್ಲಾಸ್ಟಿಕ್ ಡ್ರಂನ ಮಾದರಿ ಮತ್ತು ಪ್ಲಾಸ್ಟಿಕ್ ಚಿಲದಲ್ಲಿ ತಯಾರಿಸಬಹುದು. ಈ ನಿಟ್ಟಿನಲ್ಲಿ ಇಂಡಿ ತಾಲುಕಿನ ಹಲವಾರು ಗ್ರಾಮದಲ್ಲಿ ಕಬ್ಬಿನ ವಾಡಿಯನ್ನು ಸುಡುವುದು ಅಥವಾ ಅಲ್ಲೆ ಕೊಳೆತು ಹಾಳ ಆಗುವುದರಕಿಂತ ಅದನ್ನು ರಸಮೇವಾಗಿ ಉಪಯೊಗಿಸಿಕೊಂಡರೆ ಮೇವಿನ ಕೋರತೆ, ದಾಣಿ ಮಿಶ್ರಣಕ್ಕೆ ಬೇಕಾಗುವ ವೆಚ್ಚವನ್ನು ಕಡಿಮೆ ಮಾಡಬಹುದು ಹಾಗು ಹೆಚ್ಚಿನ  ಆದಾಯ ಪಡೆಯಬಹುದು ಎಂದು ತಿಳಿಸಿದ್ದರು. 

 ಈ ಕಾರ್ಯಕ್ರಮದ ಅಧ್ಯಕ್ಷರಾದ ಡಾ.ಆರ್. ಬಿ. ನೆಗಳೂರ, ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಇಂಡಿ ಅವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವ ಚಟುವಿಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನಿಡಿದರು ಹಾಗೆ ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ಹೈನುಗಾರಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಈ ಕಾರ್ಯಕ್ರಮ ಕುರಿತು ಮಾತನಾಡಿದರು. 

ಕ್ಷೇತ್ರೋತ್ಸವಕಾರ್ಯಕ್ರಮಕ್ಕೆ ಸುಮಾರು 45 ಜನ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದರು ಹಾಗು ಬಹಳಷ್ಟು ರೈತರು ಮೇವಿನ ಬೆಳೆಯ ಕುರಿತು ಮಾಹಿತಿಯನ್ನು ಪಡೆದಕ್ಕೆ ಖುಶಿಯನ್ನು ವ್ಯಕ್ತಪಡಿಸಿದರು ಮತ್ತು ಈ ಮೇವಿನ ತಳಿಯನ್ನು ಬೆಳೆಸಲು ಆಸಕ್ತಿ ತೊರಿಸಿದರು.

 ಡಾ. ಸಂತೋಷ ಶಿಂದೆ, ವಿಜ್ಞಾನಿಗಳು(ಪಶು ವಿಜ್ಞಾನ) ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದ್ದರು. ಡಾ. ಹಿನಾ ವಿಜ್ಞಾನಿಗಳು(ತೋಟಗಾರಿಕೆ) ವಂದನಾರ್ಪನೆ ನೆರವೇರಿಸಿದರು .ಹಿಂಗಣಿ ಗ್ರಾಮ ಪಂಚಾಯತಿ ಸದಸ್ಯರಾದ ಶಾಮರಾಮ ಧುಳಪ್ಪಾ ಬನ್ನಿ, ಗಂಗಾಬಾಯಿ ಸಿದ್ದಾರಾಮ ದೇಸಾಯಿ, ಭೂತಾಳಿ ಅಂಕಲಗಿ ಹಾಗೂ ಡಾ.ಸೈಯದಾ ಅಂಜುಂ ವಿಜ್ಞಾನಿಗಳು(ಸಸ್ಯರೋಗಶಾಸ್ತೃ) ಪಾಲ್ಗೊಂಡಿದ್ದರು.