ಮಹನೀಯರು ಒಂದು ವರ್ಗಕ್ಕೆ ಸೀಮಿತರಾಗಿಲ್ಲ ಅವರೆಲ್ಲರೂ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು : ಆರ್.ಎಚ್.ಭಾಗವಾನ್
ರಾಣೇಬೆನ್ನೂರು 18: ದಾರ್ಶನಿಕರು, ಮಹನೀಯರು ಒಂದು ವರ್ಗಕ್ಕೆ ಸೀಮಿತರಾಗಿಲ್ಲ ಅವರೆಲ್ಲರೂ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು ಎಂದು ತಹಶೀಲದಾರ ಆರ್.ಎಚ್.ಭಾಗವಾನ್ ಹೇಳಿದರು. ನಗರದ ತಹಶೀಲದಾರ ಕಚೇರಿಯಲ್ಲಿ ತಾಲೂಕ ಬಲಿಜ ಸಮಾಜ ಹಾಗೂ ತಾಲೂಕ ಆಡಳಿತದ ಸಹಯೋಗದಲ್ಲಿ ಸದ್ಗುರು ಶ್ರೀಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ರ 299 ನೇಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧ್ಯಾತ್ಮಿಕ ಚಿಂತಕ, ಹರಿಕಾರರಾಗಿದ್ದ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅನಿಷ್ಠ ಪದ್ದತಿಗಳ ವಿರುದ್ಧ ಧ್ವನಿ ಎತ್ತಿದವರಾಗಿದ್ದಾರೆ ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಿರಿ ಎಂದರು. ತಾಲೂಕ ಬಲಿಜ ಸಮಾಜದ ಕಾರ್ಯದರ್ಶಿ ಭೀಮರಾಜ್ ಕುಂಕುಮಗಾರ ಮಾತನಾಡಿ, ಪವಾಡ ಪುರುಷರಾಗಿದ್ದ ಕೈವಾರ ತಾತಯ್ಯನವರು ಜಾತಿ, ಮತಗಳ ವರ್ಣಬೇಧವನ್ನು ಖಂಡಿಸುತ್ತಾ ದೀನ ದಲಿತರ ಶೋಷಿತರ ಪರವಾಗಿ ಧ್ವನಿ ಎತ್ತಿದವರು. ಸಾಹಿತ್ಯದ ಮೇರು ಪರ್ವತವಾಗಿರುವ ಅವರು ಅಂದಿನ ಕಾಲದಲ್ಲಿಯೇ ಕಾಲ ಜ್ಞಾನ ಕೃತಿಯಲ್ಲಿ ಭವಿಷ್ಯತ್ತಿನ ಆಗು-ಹೋಗುಗಳನ್ನು ಪ್ರಚುರ ಪಡಿಸಿದವರಾಗಿದ್ದಾರೆ ಎಂದರು. ತಾಲೂಕ ಬಲಿಜ ಸಮಾಜದ ಅಧ್ಯಕ್ಷ ಮಲ್ಲೇಶ ಕುಂಕುಮಗಾರ, ಉಪಾಧ್ಯಕ್ಷ ರವಿ ಕಿರಿಗೇರಿ, ಮುಖಂಡರಾದ ಕೆ.ಜಿ. ದಿವಾಕರ ಮೂರ್ತಿ, ಮಂಜುನಾಥ ಕುಂಕುಮಗಾರ, ಗಣೇಶ ಕುಂಕುಮಗಾರ, ಹರೀಶ ಚವ್ಹಾಣ, ಮಂಜುನಾಥ ಗುತ್ತಲ, ದೇವರಾಜ ಕಿರಿಗೇರಿ, ರಮೇಶ ಗುತ್ತಲ, ಎಲ್ಲಪ್ಪ ಕುಂಕುಮಗಾರ, ಆನಂದ ಕುಂಕುಮಗಾರ, ಹನುಮಂತ ಕುಂಕುಮಗಾರ, ತಿಪ್ಪೇಸ್ವಾಮಿ ಸಾತನೂರ ಸೇರಿದಂತೆ ತಹಶೀಲದಾರ ಕಛೇರಿಯ ಸಿಬ್ಬಂಧಿ ವರ್ಗದವರು ಇದ್ದರು.
ಪೊಟೋ18ಆರ್‌ಎನ್‌ಆರ್03:- ನಗರದಲ್ಲಿ ಕೈವಾರ ತಾತಯ್ಯನವರ 299 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ತಹಶೀಲದಾರ ಆರ್.ಎಚ್.ಭಾಗವಾನ್ ಉದ್ಘಾಟಿಸಿದರು.