ಅಖಿಲ ಭಾರತ ಮುಷ್ಕರದ ಅಂಗವಾಗಿ ಗ್ರಾಪಂ ನೌಕರರ ಪ್ರಚಾರಾಂದೋಲನ

ಲೋಕದರ್ಶನ ವರದಿ

ರಾಮದುರ್ಗ,6: ಜ.8 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದ ಅಂಗವಾಗಿ ರವಿವಾರ ಗ್ರಾಮ ಪಂಚಾಯತ ನೌಕರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಷ್ಕರದ ಯಶಸ್ವಿಗಾಗಿ ಪ್ರಚಾರಾಂದೋಲನ 

ನಡೆಸಿದರು.

ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಕಾಮರ್ಿಕರ ಸ್ಥಾನಮಾನ, ಸ್ಕೀಂ ಕಾಮರ್ಿಕರ ಸೌಲತ್ತುಗಳಿಗಾಗಿ, ಖಾಸಗಿಕರಣ ವಿರೋಧಿಸಿ ಮತ್ತು ಗುತ್ತಿಗೆ ಪದ್ದತಿ ರದ್ದು ಪಡಿಸಿಲು ಒತ್ತಾಯಿಸಿ ಇದೇ ಜ.8 ಮತ್ತು 9 ರಂದು ದುಡಿಯುವ ಜನರ ಅಖಿಲ ಭಾರತ ಮುಷ್ಕರ 

ನಡೆಯಲಿದೆ. 

ಈ ಮುಷ್ಕರದ ಭಾಗವಾಗಿ ರಾಮದುರ್ಗ ತಾಲೂಕಿನ ಗ್ರಾಮ ಪಂಚಾಯತ ನೌಕರರು ಪಟ್ಟಣದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮುಷ್ಕರದ ಯಶಸ್ವಿಗಾಗಿ ಪ್ರಚಾರಾಂದೋಲನ ನಡೆಸಿ ದುಡಿಯುವ ಎಲ್ಲ ಜನರನ್ನು ಮುಷ್ಕರದಲ್ಲಿ ಭಾಗವಹಿಸಲು ವಿನಂತಿಸಿದರು. ಇದರ ಜೊತೆಗೆ ಕೇಂದ್ರ ಸರಕಾರದ ರೈತ ಕಾಮರ್ಿಕ ವಿರೋಧಿ ನೀತಿಯನ್ನು ಜನರಿಗೆ ತಿಳಿಸಿ ಹೇಳುವ ನಿಟ್ಟಿನಲ್ಲಿ ರಸ್ತೆಯುದ್ದಕ್ಕೂ ಮೋದಿ ಸರಕಾರದ ವಿರುದ್ದ ಘೋಷಣೆ ಕೂಗಿದರು.

ಪ್ರಚಾರಾಂದೋಲನದಲ್ಲಿ ಪಂಚಾಯತ ನೌಕರ ಸಂಘದ ತಾಲೂಕಾಧ್ಯಕ್ಷ ದುಂಡಯ್ಯ ದಳವಾಯಿ, ಕಾರ್ಯದಶರ್ಿ ವೀರಭದ್ರ ಕಂಪ್ಲಿ, ತಿಪ್ಪಣ್ಣ ಪೈಲಿ, ಮಲ್ಲನಗೌಡ ಪಾಟೀಲ, ಸತ್ತೆಪ್ಪ ರೂಗಿ ಮತ್ತುಮಂಜುನಾಥ ಮನಿಕಟ್ಟಿ ಭಾಗವಹಿಸಿದ್ದರು.