ಜೀವನ ಯಾತ್ರೆ ಮುಗಿಸಿದ ಅಜ್ಜಿಮನೆ ನಾಗೇಂದ್ರ

ಬೆಂಗಳೂರು, ಮೇ 18,ನಿಗರ್ವಿ,  ಜನಾನುರಾಗಿ ಅಜ್ಜಿಮನೆ ನಾಗೇಂದ್ರ ವಿಧಿವಶರಾಗಿದ್ದಾರೆ.  ಅವರಿಗೆ 60ಕ್ಕೂ ಹೆಚ್ಚು ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. ಜನೋಪಕಾರಿ,  ಕುಳ್ಳನೆಯ ಮೈಕಟ್ಟು,  ಗಂಧ ಹಣೆಯ ಮೇಲೆ ಇಟ್ಟುಕೊಂಡು ಧಮ್ ಎಳೆಯುತ್ತಾ ಇರುವ ವ್ಯಕ್ತಿಯನ್ನು ರವೀಂದ್ರ ಕಲಾಕ್ಷೇತ್ರ ಆಸುಪಾಸಿನಲ್ಲಿ ನೀವು ನೋಡಿಯೇ ಇರುತ್ತೀರಿ. ಅವರೇ ಅಜ್ಜಿಮನೆ ನಾಗೇಂದ್ರ.
ಕರ್ನಾಟಕ ಸರ್ಕಾರದ ಸಂಸ್ಕೃತಿ ಇಲಾಖೆಯಲ್ಲಿ ಇವರದು ಹಲವಾರು ವರ್ಷಗಳ ವೃತ್ತಿ. ಕರ್ನಾಟಕ ಸರ್ಕಾರ ‘ಸಿರಿಗಂಧ’ ಪುಸ್ತಕ ಮಳಿಗೆಯನ್ನು ಟೌನ್ ಹಾಲ್ ಹಾಗೂ ರವೀಂದ್ರ ಕಲಾಕ್ಷೇತ್ರ ಮಧ್ಯದಲ್ಲಿ ಪ್ರಾರಂಭಿಸಿದಾಗಿನಿಂದ ಅಲ್ಲಿ ಅಜ್ಜಿಮನೆ ನಾಗೇಂದ್ರ ಅವರದೇ ಕಾರುಬಾರು. ಅಜ್ಜಿಮನೆ ನಾಗೇಂದ್ರ ಕನ್ನಡ ಚಿತ್ರ ರಂಗಕ್ಕೂ ಬಹಳ ಪರಿಚಯವಾದ ವ್ಯಕ್ತಿತ್ವ. ಹಲವಾರು ವ್ಯಕ್ತಿಗಳಿಗೆ ಸಹಾಯ ಹಾಗೂ ಸಲಹೆಗಳನ್ನು ಮೂರು ದಶಕಗಳಿಂದ ನೀಡುತ್ತಾ ಬಂದವರು. ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ನಿಕಟವರ್ತಿ ಇವರು. ದೇಸಾಯಿ ಅವರ ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೆ, ಪ್ರೇಮ ರಾಗ ಹಾಡು ಗೆಳತಿ, ಪರ್ವ, ಮರ್ಮ, ರಮ್ಯ ಚೈತ್ರ ಕಾಲ ಹಾಗೂ ಇನ್ನಿತರ ಸಿನಿಮಾಗಳಿಗೆ ಕಥೆ, ಚಿತ್ರಕಥೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ದೊಡ್ಡ ಹುಲ್ಲುರು ರೂಕ್ಕೋಜಿ ಅವರ ‘ಡಾ ರಾಜಕುಮಾರ್ ಸಮಗ್ರ ಚರಿತ್ರೆ’ ರಾಷ್ಟ್ರ ಪ್ರಶಸ್ತಿ ಪುಸ್ತಕಕ್ಕು ಸಹ ಅಜ್ಜಿಮನೆ ನಾಗೇಂದ್ರ ಅಪಾರವಾದ ನೆರವನ್ನು ನೀಡಿದ್ದರು.
ಯಾವುದನ್ನೂ ಅಪೇಕ್ಷಿಸದೆ ಸಹಾಯ ಮಾಡುವ ಗುಣ ಇವರಲ್ಲಿ ಇದ್ದದ್ದು ವಿಶೇಷ.ಆದರೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಕಾರಣ ಅವರು ಸರ್ಕಾರಿ ಉಧ್ಯಮದಲ್ಲಿ ಇದ್ದವರು. ಆಗಿನ ಕಾಲದ ಮುಖ್ಯ ಮಂತ್ರಿ  ರಾಮಕೃಷ್ಣ ಹೆಗ್ಡೆ ಅವರ ಕಚೇರಿಯಲ್ಲಿ ಅಜ್ಜಿಮನೆ ನಾಗೇಂದ್ರ ಸರ್ಕಾರಿ ಕೆಲಸ ಪ್ರಾರಂಭ ಮಾಡಿ ಪ್ರಸಿದ್ದಿ ಆಗಿದ್ದು ಸರ್ಕಾರಿ ಸೇವೆಯಲ್ಲಿ ನಾಲ್ಕು ದಶಗಳ ಸೇವೆ ಆಗಿದೆ.ಸದಾ ಹಸನ್ಮುಖಿ, ಯಾರ ಮೇಲೂ ಬೇಜಾರು ಮಾಡಿಕೊಳ್ಳದ ಸ್ವಭಾವ ಜೀವನದಲ್ಲಿ ಒಬ್ಬಂಟಿಗನಾಗಿ ಸಹೋದರಿಯ ಮದುವೆ ಮಾಡಿ ತಾವೊಬ್ಬರೆ ನೆಟಕಲ್ಲಪ್ಪ ಸರ್ಕಲ್ ಬಳಿ ಇರುವ ನಿವಾಸದಲ್ಲಿ ವಾಸವಿದ್ದರು. ಅಜ್ಜಿಮನೆ ನಾಗೇಂದ್ರ ಅವರಿಗೆ ಸಹೋದರಿ ಎಂದರೆ ಪಂಚಪ್ರಾಣ. ಶಿವಮೊಗ್ಗದಲ್ಲಿರುವ ಸಹೋದರಿ ಜೊತೆ ಪ್ರತಿ ರಾತ್ರಿ ಹಾಗೂ ಬೆಳಗ್ಗೆ ದೂರವಾಣಿಯಲ್ಲಿ ಮಾತು ಖಾಯಂ ಆಗಿತ್ತು.
 ಆದರೆ ನಿನ್ನೆ ಬೆಳಗ್ಗೆ 10 ಗಂಟೆಗೆ ಅಜ್ಜಿಮನೆ ನಾಗೇಂದ್ರ ಫೋನ್ ಉತ್ತರಿಸುತ್ತಾ ಇಲ್ಲ. ತಕ್ಷಣ ಬೆಂಗಳೂರಿನ ಕೆಲವು ವ್ಯಕ್ತಿಗಳಿಗೆ ಫೋನಾಯಿಸಿ ಅವರ ಸಹೋದರಿ ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ. ವಿಷಯ ಅರಿತು ಸಹೋದರಿ ಬೆಂಗಳೂರಿಗೆ ಆಗಮಿಸಿ ಅಂತ್ಯಕ್ರಿಯೆ ವ್ಯವಸ್ಥೆ ಮಾಡುತಿದ್ದಾರೆ. ನಾಗೇಂದ್ರ  60 ವರ್ಷ ಮೇಲ್ಪಟ್ಟವರಾದ ಕಾರಣ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ  ಪರೀಕ್ಷೆಗೆ ಸಹ ಒಳಪಡಿಸಲಾಗಿದೆ.
ಅಜ್ಜಿಮನೆ ನಾಗೇಂದ್ರ ಒಳ್ಳೆಯ ಹೆಸರಿನ ಜೊತೆಗೆ ಅಪಾರ ಸ್ನೇಹ ಬಳಗವನ್ನು ಬಿಟ್ಟು ಅಗಲಿದ್ದಾರೆ. ಡಾ. ದೇವರಾಜ್ ಅವರು 'ವೀರಪುತ್ರ' ಚಿತ್ರದ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಹಿಡಿಸುವಂತಹ ಕಥೆಯ ಮೂಲಕ ಪ್ರೇಕ್ಷಕರನ್ನು ತಲುಪುವ ಉತ್ಸಾಹದಲ್ಲಿದ್ದಾರೆ... ಗುರು ಬಂಡಿ ಅವರು ತನ್ವಿ ಪ್ರೊಡಕ್ಷನ್ ಹೌಸ್ ಮೂಲಕ ‘ಧೀರ ಸಾಮ್ರಾಟ್’ ಎಂಬ ಚಿತ್ರವನ್ನು  ನಿರ್ಮಿಸುತ್ತಿದ್ದು, ಈಗಾಗಲ್ಲೇ ಚಿತ್ರೀಕರಣ ಮುಕ್ತಾಯವಾಗಿದೆ, ಪೋಸ್ಟ್ ಪ್ರೊಡಕ್ಷನ್ಸ್  ಸಹ ಬಿರುಸಿನಿಂದ ಸಾಗಿದೆ..
 'ವೀರಪುತ್ರ' ಚಿತ್ರವನ್ನು ತನ್ವಿ ಪ್ರೊಡಕ್ಷನ್ ಹೌಸ್ ಮೂಲಕ ಗುರು ಬಂಡಿ ಅವರೇ ನಿರ್ಮಿಸುತ್ತಿದ್ದಾರೆ..ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು  ಡಾ.  ದೇವರಾಜ್ ವಹಿಸಿಕೊಂಡಿದ್ದಾರೆ.  ರಾಘವ್ ಸುಭಾಷ್ ಸಂಗೀತ ‌ನಿರ್ದೇಶನ, ಸುಭಾಷ್ ಬೆಟಗೇರಿ ಸಾಹಿತ್ಯ ಹಾಗೂ ಸಾಗರ್ ಗುಲ್ಬರ್ಗ ನೃತ್ಯ ನಿರ್ದೇಶನವಿದೆ.  ಉಳಿದ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.ನಾಯಕ, ನಾಯಕಿ, ಪೋಷಕ ಕಲಾವಿದರ ಪಾತ್ರಗಳಿಗೆ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರೊಂದಿಗೆ ಸಂಪರ್ಕದಲಿದ್ದು, ಇನ್ನೆರೆಡು ವಾರಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.