ಹಾನಗಲ್ 17ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಹಾನಗಲ್ ನಗರದ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಜಾತ್ರೆಯ ಯಶಸ್ಸಿಗಾಗಿ ರಚಿಸಲಾಗಿರುವ ನಾನಾ ಸಮಿತಿಗಳ ಸದಸ್ಯರು ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡುವಂತೆ ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.
ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದ ಕಾರ್ಯಾಲಯದಲ್ಲಿ ಪದಾಧಿಕಾರಿಗಳು, ಪ್ರಮುಖ ಭಕ್ತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಈಗಾಗಲೇ ನಗರದಲ್ಲಿ ಹಬ್ಬದ ಸಡಗರ ಕಂಡು ಬರುತ್ತಿದೆ.ಈ ಬಾರಿ ಜಾತ್ರೆಗೆ ಮತ್ತಷ್ಟು ಮೆರಗು ತುಂಬೋಣ.ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾನಾ ಜವಾಬ್ದಾರಿ ವಹಿಸಲಾಗಿದೆ. ಸ್ವಚ್ಛತೆಗೆ ಪುರಸಭೆ ಒತ್ತು ನೀಡಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಗುರುತಿಸಿರುವ ಕುಂಟನಹೊಸಳ್ಳಿ - ಸುರಳೇಶ್ವರ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನೊಂದು ಪರ್ಯಾಯ ಮಾರ್ಗ ಆರೆಗೊಪ್ಪ-ಹುಡೆ ಕ್ರಾಸ್ ವರೆಗೆ ಜಂಗಲ್ ಕಟಾವು ನಡೆಸಲಾಗಿದೆ. ಮಾ.18 ರಿಂದ ಆರಂಭಗೊಳ್ಳಲಿರುವ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ, ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಪ್ರಮುಖರಾದ ನಾಗರಾಜ ಉದಾಸಿ, ಆದರ್ಶ ಶೆಟ್ಟಿ,ಸುರೇಶಣ್ಣ ಪೂಜಾರ,ರಾಜು ಗೌಳಿ,ಭೋಜರಾಜ ಕರೂದಿ,ಯಲ್ಲಪ್ಪ ಶೇರಖಾನಿ,ರಾಜು ಶಿರಪಂಥಿ ಸೇರಿದಂತೆ ಇನ್ನೂ ಹಲವರಿದ್ದರು.