ಗ್ರಾಮದೇವತೆ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭ

Gramdevate Jatra Mahotsava starts from today

ಗ್ರಾಮದೇವತೆ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭ  

ತಾಳಿಕೋಟೆ 19 :ತಾಲ್ಲೂಕಿನ ತುಂಬಗಿ ಗ್ರಾಮದಲ್ಲಿ ಪ್ರತಿ 3 ವರ್ಷಕೊಮ್ಮೆ ಜರಗುವ ಗ್ರಾಮದೇವತೆ ಜಾತ್ರೆಯು ಇದೇ ಡಿ.20 ರಿಂದ ಡಿ.24ರವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ. ಡಿ.20 ರಂದು ವಿವಿಧ ಕಲಾವಿದರಿಂದ ಡೊಳ್ಳಿನ ಪದಗಳು ಜರಗುವುವು. ಅಂದು ಬೆಳಿಗ್ಗೆ 5-00 ಘಂಟೆಯಿಂದ ಮಧ್ಯಾಹ್ನ: 1-00 ಘಂಟೆಯವರೆಗೆ, ದೇವಿ ಪಾದಗಟ್ಟಿಯಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಗ್ರಾಮದೇವತೆಯ ಭವ್ಯ ರಥೋತ್ಸವವು ದೇವಿ ಮಂಟಪದವರೆಗೆ ಜರುಗುತ್ತದೆ. ಮೆರವಣಿಗೆಯಲ್ಲಿ ಜಮಖಂಡಿ ಡಿ.ಜೆ. ಸೌಂಡ್ ಸಿಸ್ಟಮ್ , ಸರಸ್ವತಿ ಟ್ಯೂಶನ್ ಕ್ಲಾಸ್ ಮಕ್ಕಳಿಂದ ಕೋಲಾಟ, ಸಾರವಾಡಶ್ರೀ ಶಕ್ತಿ ಗೊಂಬೆ ಕುಣಿತದವರಿಂದ ಗೊಂಬೆಯಾಟ, ಹರಿಂದ್ರಾಳ ತಂಡದಿಂದ ಕರಡಿ ಮಜಲು, ಹೊಳಿಕೊಣ್ಣೂರ ತಂಡದಿಂದ ಡೊಳ್ಳಿನ ವಾಲಗ, ಉಡುಪಿ ಕಲಾ ತಂಡದಿಂದ ಚಂಡಿಮೇಳ, ಇಂಗಳೇಶ್ವರ ತಂಡದಿಂಡ ಜೋಗತಿ ನೃತ್ಯ, ಮೂಕೀಹಾಳ ಕುದರಿಗೌಡ ಇವರಿಂದ ಕುದರಿ ಕುಣಿತ, ಮತ್ತು ಫತ್ತೇಪೂರ ಹೂವಿನಹಳ್ಳಿ, ಹೊಸಹಳ್ಳಿ ಕೆಸರಟ್ಟಿ, ಅಂಬಳನೂರ, ಸಾಸನೂರ ಇವರಿಂದ ಡೊಳ್ಳಿನ ವಾಲಗ ಜರಗುವುದು. ಡಿ.20 ಮತ್ತು ಡಿ.22ರಂದು ರಾತ್ರಿ 10 ಘಂಟೆಗೆ ‘ಶ್ರೀ ದೇವಿ ಮಹಾತ್ಮೆ’ ಅರ್ಥಾತ್ ‘ಶುಂಭ ನಿಶುಂಭರ ವಧೆ’ ಎಂಬ ಸುಂದರ ಬಯಲಾಟ, ಡಿ.21, 22 ಮತ್ತು 23 ರಂದು ರಂದು ಬೆಳಿಗ್ಗೆ: 9-00 ಘಂಟೆಗೆ ಕಂಬಾಗಿಯ ಸುರೇಶ ಹ. ಹಂಗರಗಿ ಹಾಗೂ ಹಂದಿಗುಂದಿಯ ಮಹಾದೇವಿ ಬೌ.ದೇವರವರ ಇವರಿಂದ ಗೀಗೀಪದ. ಡಿ.21 ಹಾಗೂ ಡಿ.23 ರ ರಾತ್ರಿ: 10-00 ಘಂಟೆಯಿಂದ ಶ್ರೀ ರಾಮಲಿಂಗೇಶ್ವರ ನಾಟ್ಯ ಸಂಘ ತುಂಬಗಿ ಇವರಿಂದ ‘ಸಮಾಜ ಮೆಚ್ಚಿದ ಸರದಾರ’ ಅರ್ಥಾತ್ ‘ಮನೆ ಒಂದು ಮನ ಎರಡು’ ಎಂಬ ಸಾಮಾಜಿಕ ನಾಟಕ ತೆರಬಂಡಿ ಸ್ಪರ್ಧೆ:ಡಿ.21 ರಂದು ಬೆಳಿಗ್ಗೆ: 9-00 ಘಂಟೆಗೆ ತೆರಬಂಡಿ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ಪ್ರಥಮ ರೂ.40001, ದ್ವಿತೀಯ -30001, ತೃತೀಯ-20001 ಬಹುಮಾನ ಚತುರ್ಥ-20001, ಐದನೆಯ-15001,ಆರನೆಯ-10001 ಹಾಗೂ ಏಳನೆಯ ಬಹುಮಾನ-7501 ನೀಡಲಾಗುವುದು ಮಾಹಿತಿಗೆ 9900861943,9591193028 ಸಂಪರ್ಕಿಸಬಹುದು.ಡಿ.21 ರಿಂದ ಡಿ.24ರವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಮಲ್ಲಿಕಾರ್ಜುನ ಕ್ಲಿನಿಕ್ ತುಂಬಗಿ ಅವರಿಂದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಡಿ 22 ರಂದು ಬೆಳಿಗ್ಗೆ 10.00 ಗಂಟೆಯಿಂದ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಅವರಿಂದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ವಿಜಯಪುರ ಯಶೋಧಾ ಆಸ್ಪತ್ರೆ ಅವರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯುವುದು.