ಬೆಂಗಳೂರು, ಏ.2, ಪಿತೃವಾಕ್ಯ ಪರಿಪಾಲಕ ಶ್ರೀರಾಮನಂತೆ ನೀವು ಸರ್ಕಾರದ ವಾಕ್ಯವನ್ನು ಪಾಲಿಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಜನತೆಗೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ. ಗುರುವಾರ ಶ್ರೀರಾಮನವಮಿಯ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಸಚಿವರು, ಶ್ರೀರಾಮ 14 ವರ್ಷ ‘ವನವಾಸ’ ಮಾಡಿದಂತೆ ನೀವು 21 ದಿನಗಳ ‘ಗೃಹವಾಸ’ ಮಾಡಿರಿ. ಮನೆಯ ಲಕ್ಮಣ ರೇಖೆಯನ್ನು ದಾಟದಿರಿ. ಮನೆ ಮಂದಿಗೆ ಮಜ್ಜಿಗೆ-ಪಾನಕ-ಕೊಸಂಬರಿ ಹಂಚಿ ರಾಮನವಮಿಯನ್ನು ಸಂಭ್ರಮಿಸಿ ಎಂದು ಅವರು ತಿಳಿಸಿದ್ದಾರೆ.