ಆರೋಗ್ಯ ಶಿಕ್ಷಣಕ್ಕೆ ಆದ್ಯತೆ ಕೊಡದ ಸರ್ಕಾರ: ಎಂ ಬಿ ಬಸವರಾಜ

Government not giving priority to health education: MB Basavaraja

ಹೂವಿನ ಹಡಗಲಿ 22:   ರಾಜ್ಯದಲ್ಲೀಗ ಅಕ್ಷರ, ಆರೋಗ್ಯ ಎರಡಕ್ಕೂ ಬೆಲೆ ಇಲ್ಲದಂತಾಗಿದೆ. ಪಕ್ಷ ಬೇಧ ಮರೆತು ಎಲ್ಲರೂ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಹೋರಾಟ ಮಾಡಬೇಕು ಎಂದು  ಜಿಲ್ಲಾ ಬಿಜೆಪಿ ಪಕ್ಷದ ಮುಖಂಡ ಎಂ ಬಿ ಬಸವರಾಜ ಹೇಳಿದರು. ರಾಜ್ಯ ಸರ್ಕಾರ ಕ್ಯಾಬಿನೆಟ್ ಉಪಸಮಿತಿ ನೀಡಿರುವ. ವರದಿಯನ್ನು ಆಧರಿಸಿ ಮುಂದಿನ  ಐದು ವರ್ಷಗಳಲ್ಲಿ 350ಕೋಟಿ ಹಣ ಉಳಿಸಲು ರಾಜ್ಯಸರ್ಕಾರ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೋರಟಿದೆ ಎಂದ ಅವರು ರಾಜ್ಯದ ಒಂಭತ್ತು ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೋರಟಿದೆ.ಅವೈಜ್ಞಾನಿಕವಾಗಿ ರಾಜ್ಯ ಸರ್ಕಾರ ಮಾಡಿರುವ ತಿರ್ಮಾನ ಖಂಡನೀಯ ಎಂದರು.ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯಲು 5 ಕೋಟಿ ರೂ. ಕೊಡುತ್ತಿದ್ದರು. 

 ಅದು ಈಗಲೂ ಮುಂದುವರೆದಿದೆ. ವಿದ್ಯೆಯನ್ನು ಮಾರಾಟಕ್ಕಿಟ್ಟ ಭ್ರಷ್ಟ ವ್ಯವಸ್ಥೆ ಈಗಲೂ ಮುಂದುವರಿದಿದೆ. ವಿದ್ಯಾರ್ಥಿಗಳ ಶುಲ್ಕದಲ್ಲಿ ವಿಶ್ವವಿದ್ಯಾಲಯ ನಡೆಯುವಂತಾಗಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಇನ್ನೂ ಏನೇನೋ ಆವಾಂತರ ಆಗುತ್ತದೆ ಗೋತ್ತಿಲ್ಲ. ಬರಿ ಮಾತಿನಲ್ಲಿ ಅಭಿವೃದ್ಧಿ ಜಪ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಜನರಿಗೆ ಛಡಿ ಏಟು ನೀಡುತ್ತದೆ.ಅಧಿಕಾರಿ ಕುರ್ಚಿ ಆಸೆಗಾಗಿ ರಾಜ್ಯ ಸರ್ಕಾರ ಕನ್ನಡ ಸರ್ಕಾರಿ ಶಾಲೆಗಳನ್ನು ವೀಲೀನದ ಹೆಸರಲ್ಲಿ ಅವುಗಳನ್ನು ಮುಚ್ಚಲು ಹೋರಟಿದೆ. ಸಿದ್ದರಾಮಯ್ಯನವರು ಎಸ್ಸಿಪಿ- ಟಿಎಸ್ಪಿ ಯೋಜನೆಗೆ ಕಳೆದ ಹಣಕಾಸು ವರ್ಷದಲ್ಲಿ 39,914 ಕೋಟಿ ರೂ. ಘೋಷಿಸಿದ್ದರು. ಆದರೆ, 23,485 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ರಾಜ್ಯದ. ಅಭಿವೃದ್ಧಿ ಕೆಳಮಟ್ಟಕ್ಕೆ ಕುಸಿದಿದೆ. ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ದೆಹಲಿಯ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಈಡಿ ದೇಶದಲ್ಲೇ ಕಾಂಗ್ರೆಸ್ ಪಕ್ಷ  ಮುಂದಿನ ದಿನಗಳಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಆರೋಪಿಸಿದರು.