ಏರ್ ಇಂಡಿಯಾದ ಸಂಪೂರ್ಣ ಖಾಸಗೀಕರಣಕ್ಕೆ ಸರ್ಕಾರ ಬದ್ಧ: ಪುರಿ

  ನವದೆಹಲಿ, ಆ 29        ಏರ್ ಇಂಡಿಯಾದ ಸಂಪೂರ್ಣ ಖಾಸಗೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ. 

 ನಾಗರಿಕ ವಿಮಾನಯಾನ ವರದಿಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿ,  ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಸಂಕಲ್ಪವನ್ನು ಸರ್ಕಾರ ಮಾಡಿದೆ  ನಾವು ಲಭ್ಯವಿರುವ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಉತ್ತಮವಾದ ವ್ಯವಹಾರವನ್ನು ಪಡೆಯಬೇಕು. ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಹಲವರು ತುಂಬಾ ಆಸಕ್ತಿ ಹೊಂದಿದ್ದಾರೆ ಎಂದ ಅವರು "ಏರ್ ಇಂಡಿಯಾವನ್ನು ಯಾರು ಸ್ವಾಧೀನಪಡಿಸಿಕೊಳ್ಳುತ್ತಾರೋ ಅವರು ತುಂಬಾ ಅದೃಷ್ಟಶಾಲಿಯಾಗುತ್ತಾರೆ ಮತ್ತು ಬಲವಾದ ಖಾಸಗಿ ವಲಯದ ತತ್ವಗಳ ಪ್ರಕಾರ ಅದನ್ನು ಮುನ್ನಡೆಸಲು ಸಾಧ್ಯವಾಗುತ್ತದೆ" ಎಂದು ಹೇಳಿದರು. 

 ಈ ಹಿಂದೆ ಜುಲೈ 11 ರಂದು ಸಚಿವರು ಲೋಕಸಭೆಗೆ ರಾಷ್ಟ್ರೀಯ ವಾಹಕ ಏರ್ ಇಂಡಿಯಾದ ಆಯಕಟ್ಟಿನ ಹೂಡಿಕೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದರು 

 ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ ಮತ್ತು ಈ ಕ್ರಮವು ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು. 

 "ನಾವು ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವುದರ ಜತೆಗೆ ಕಂಪನಿಯು ಭಾರತೀಯರ ಕೈಯಲ್ಲೇ ಉಳಿಯುವಂತೆ ನೋಡಿಕೊಳ್ಳುತ್ತೇವೆ" ಎಂದು ಅವರು ಹೇಳಿದರು. 

 ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದ ಸಚಿವರು,  ಏರ್ ಇಂಡಿಯಾಗೆ ಹೂಡಿಕೆ ಮಾಡಲು ಸರ್ಕಾರ ಬದ್ಧವಾಗಿದ್ದರೂ ಸಹ, ಸರ್ಕಾರವು ಹಣಕಾಸಿನ ನೆರವಿನೊಂದಿಗೆ ಏರ್ ಇಂಡಿಯಾದ ಪುನರುಜ್ಜೀವನ ಯೋಜನೆಗೆ ಅನುಮೋದನೆ ನೀಡಿದೆ, ಇದು ಸ್ಪರ್ದಾತ್ಮಕ ಮತ್ತು ಲಾಭದಾಯಕ ವಿಮಾನಯಾನ ಸಮೂಹವನ್ನು ನಿರ್ಮಿಸುವತ್ತ ಗಮನಹರಿಸುತ್ತದೆ ಎಂದು ತಿಳಿಸಿದ್ದರು.