ಹಾವೇರಿ: ಮೇ 11: ಕೋವಿಡ್ ಲಾಕ್ಡೌನ್ ಕಾರಣ ಸಂಕಷ್ಟದಲ್ಲಿರುವ ತಾಲೂಕಿನ ಎರಡು ಸಾವಿರ ಜನರಿಗೆ ಉಚಿತ ಆಹಾರ ಕಿಟ್ ವಿತರಿಸಲಾಗುವುದು. ಈಗಾಗಲೇ ವಿತರಣೆ ಕಾರ್ಯ ಆರಂಭವಾಗಿದ್ದು 1300 ಕಿಟ್ಗಳು ಮೊದಲ ಹಂತದಲ್ಲಿ ವಿತರಿಸಲಾಗುತ್ತದೆ ಎಂದು ರಾಜ್ಯ ಕೃಷಿ ಮಂತ್ರಿ ಬಿ.ಸಿ.ಪಾಟೀಲ ಅವರು ತಿಳಿಸಿದರು.
ಹಿರೇಕೆರೂರು ಪಟ್ಟಣದಲ್ಲಿಂದು ಕಾಮರ್ಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿರುವ ಕ್ಷೌರಿಕ ವರ್ಗದವರು, ಆಟೋ, ಟ್ಯಾಕ್ಷಿ ಚಾಲಕರು, ದಜರ್ಿಯವರು, ಚಮ್ಮಾರರು, ಕುಂಬಾರರು, ಕಟ್ಟಡ ಕಾಮರ್ಿಕ ವರ್ಗದವರಿಗೆ ಸಕರ್ಾರದಿಂದ ಆಹಾರ್ ಕಿಟ್ ಹಾಗೂ ಆಥರ್ಿಕ ಪ್ಯಾಕೇಜ್ಗಳನ್ನು ಸಕರ್ಾರ ಘೋಷಿಸಿದ್ದು, ಇಂದು ಆಹಾರ್ ಪ್ಯಾಕೇಟ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿಗೆ ಐದು ಸಾವಿರ ಆಹಾರ ಕಿಟ್ಗಳು ಬಂದಿವೆ. ಹಿರೇಕೆರೂರ ತಾಲೂಕಿಗೆ ಎರಡು ಸಾವಿರ ಕಿಟ್ಗಳ ಅವಶ್ಯಕತೆ ಇದ್ದು 1300 ಕಿಟ್ಗಳನ್ನು ಮೊದಲನೆ ಹಂತದಲ್ಲಿ ವಿತರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಕಷ್ಟದಲ್ಲಿರುವ ಹೂ ಬೆಳೆಗಾರರು, ಕ್ಷೌರಿಕರು, ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ವೃತ್ತಿಪರ ಕೆಲವು ಸಮುದಾಯಗಳನ್ನು ಗುರುತಿಸಿ 1610 ಕೋಟಿ ರೂ.ಗಳ ಹೊಸ ಪ್ಯಾಕೇಜ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇತರೇ ಸಂಕಷ್ಟದಲ್ಲಿರುವ ಇತರ ವೃತ್ತಿಪರ ವರ್ಗದವರನ್ನು ಗುರುತಿಸಿ ಅವರ ನೇರವಿಗೆ ನಿಲ್ಲುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಹಾಗೂ ತರಕಾರಿ ಮತ್ತು ರೇಷ್ಮೆ ಬೆಳೆಗಾರರಿಗೆ ಶೀಘ್ರವೇ ಸಕರ್ಾರದಿಂದ ಹೊಸ ಪ್ಯಾಕೇಜ್ ಘೋಷಣೆ ಮಾಡುವ ಭರವಸೆಯನ್ನು ಸಹ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸಕರ್ಾರಕ್ಕೆ ಸಲ್ಲಿಕೆ: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ರೈತರ ಸಮಸ್ಯೆಗಳನ್ನು ಆಲಿಸಲು ಅವರ ಬೇಡಿಕೆಗಳ ಕುರಿತಂತೆ ಖುದ್ದಾಗಿ ರಾಜ್ಯದ 30 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಸಲ್ಲಿಸಿದ್ದೇನೆ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದೇನೆ.
ಮುಂಗಾರು ಬಿತ್ತನೆ ಕಾರ್ಯ ಮೇ ಅಂತ್ಯದೊಳಗೆ ಪ್ರಾರಂಭವಾಗಲಿದ್ದು ಕೃಷಿ ಇಲಾಖೆ ಬಿತ್ತನೆಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜಗಳು ಸೇರಿದಂತೆ ಕೃಷಿಗೆ ಪೂರಕವಾಗುವ ಎಲ್ಲ ಸಲಕರಣೆಗಳ ಸಿದ್ದತೆ ನಡೆಸಲಾಗುತ್ತಿದೆ. ಹಸಿರು ವಲಯದಲ್ಲಿದ್ದ ಜಿಲ್ಲೆಗಳು ಕೆಂಪು ವಲಯಗಳಾಗಿ ಮಾರ್ಪಡುತ್ತಿವೆ, ಸಾರ್ವಜನಿಕರು ಸೋಂಕಿನ ಲಕ್ಷಣಗಳು ಕಂಡರೆ ತಕ್ಷಣವೇ ಪರೀಕ್ಷೆಗೆ ಒಳಡಿಸಿಕೊಳ್ಳಿ, ನಿರ್ಲಕ್ಷ್ಯ ಮಾಡಿದರೆ ಅವರ ಕುಟುಂಬವನ್ನು ಅವರೇ ತೊಂದರೆಗೆ ಸಿಲುಕಿಸಿದಂತಾಗುತ್ತದೆ ಎಂದರು.
ಹೊರ ರಾಜ್ಯದಿಂದ ಬಂದವರು ಸ್ವ ಇಚ್ಛೆಯಿಂದ ಹೊಂ ಕ್ವಾರೈಂಟೈನ್ ಆಗಿ 14 ದಿವಸ ಮನೆಯಲ್ಲಿದ್ದು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ವಿದೇಶದಿಂದ ಸ್ವದೇಶಕ್ಕಾಗಮಿಸುವರು ರಾಜ್ಯ, ಜಿಲ್ಲಾ ಗಡಿ ಭಾಗದಲ್ಲಿ ಪರೀಕ್ಷೆ ಮಾಡಿಸಿಕೊಂಡು ಹೋಗಬೇಕು ಎಂದರು.
ಆಹಾರ ಕಿಟ್ ವಿತರಣೆಯಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ, ತಹಶೀಲ್ದಾರ ಭಾಗವಾನ್ ಇತರರು ಉಪಸ್ಥಿತರಿದ್ದರು.