ನವದೆಹಲಿ, ಡಿಸೆಂಬರ್ 26 ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಸಾವಿತ್ರಿಬಾಯಿ
ಫುಲೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ದಲಿತರ ಆಶೋತ್ತರಕ್ಕಾಗಿ ಹೊಸ ಪಕ್ಷ ಕಟ್ಟುವ
ಘೋಷಣೆ ಮಾಡಿದ್ದಾರೆ. ಪ್ರಮುಖ ದಲಿತ ನಾಯಕಿಯಾಗಿರುವ
ಫುಲೆ ಕಳೆದ ವರ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಬಿಜೆಪಿಗೆ ರಾಜೀನಾಮೆ ನೀಡಿದ್ದರು,ಈಗ ಕ್ರಿಸ್ಮಸ್ ಸಯಯದಲ್ಲೀ ಕೈಗೆ ರಾಜಿನಾಮೆ ಕೊಟ್ಟು ಹೊರಬಂದಿದ್ದಾರೆ. ಆಡಳಿತ ಬಿಜೆಪಿ ಸಮಾಜದ ವಿಭಜನೆಗೆ
ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದ್ದ ಅವರು ಇದೀಗ ಕಾಂಗ್ರೆಸ್ ನಲ್ಲಿ
ತನ್ನ ಧ್ವನಿ, ನೋವು ಕೇಳುತ್ತಿಲ್ಲ ಎಂಬ ನೋವಿನ ಮೇರೆಗೆ
ಪಕ್ಷ ತೊರೆದಿದ್ದಾರೆ.ಬಿಎಸ್ ಪಿ ನಾಯಕಿ ಮಾಯಾವತಿಗೆ ನಿಕಟವಾಗಿದ್ದ ಸಾವಿತ್ರಿ ಪುಲೆ
2000 ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2002, 2007 ಮತ್ತು 2012 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ
ಸ್ಪರ್ಧಿಸಿದ್ದರು. 2012 ರಲ್ಲಿ ಜಯ ಗಳಿಸಿದ್ದರು . 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ
ಲೋಕಸಭೆಗೆ ಪ್ರವೇಶ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು.